ಸುಳ್ಯ ಜಟ್ಟಿಪಳ್ಳದ ಬೊಳಿಯಮಜಲು ಶ್ರೀ ಶಿರಾಡಿ ರಾಜನ್ ದೈವಸಾನದಲ್ಲಿ ನೇಮೋತ್ಸವವು ಏಪ್ರಿಲ್ 10 ರಂದು ನಡೆಯಲಿದ್ದು, ಆ ಪ್ರಯುಕ್ತ ಗೊನೆಮುಹೂರ್ತವು ಇಂದು ಬೆಳಿಗ್ಗೆ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು, ಉತ್ಸವ ಸಮಿತಿ ಪದಾಧಿಕಾರಿಗಳು, ಸ್ಥಳ ಮೊಕ್ತೇಸರರು, ಭಕ್ತಾದಿಗಳು ಉಪಸ್ಥಿತರಿದ್ದರು.

ಏಪ್ರಿಲ್ 9ರಂದು ಪೂರ್ವಾಹ್ನ 7ಗಂಟೆಗೆ ಗಣಪತಿ ಹವನ, ಶುದ್ದಿ ಕಲಶ, ರಾತ್ರಿ 8 ಗಂಟೆಗೆ ಭಂಡಾರ ಇಳಿಯುವುದು, ಏಪ್ರಿಲ್ 10 ರಂದು ಪೂರ್ವಾಹ್ನ ಶ್ರೀ ಶಿರಾಡಿ ರಾಜನ್ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಗುಳಿಗ ದೈವದ ಕೋಲ, ಪ್ರಸಾದ ವಿತರಣೆ ನಡೆಯಲಿರುವುದು.