ಇಂದು ಧ್ವಜಾರೋಹಣ
ಎ. 10ರಂದು ದರ್ಶನ ಬಲಿ, ಸಾಂಸ್ಕೃತಿಕ ಕಾರ್ಯಕ್ರಮ
ಎ. 11ರಂದು ವಾಲಸಿರಿ ಉತ್ಸವ
ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಎ.1ರಂದು ಗೊನೆ ಮುಹೂರ್ತ ದೊಂದಿಗೆ ಆರಂಭಗೊಂಡಿದ್ದು ಇಂದು(ಎ.6) ಮುಂಡೋಡಿ ಮಾಳಿಗೆಯಿಂದ ಶಿರಾಡಿ ದೈವದ ಭಂಡಾರ ಬಂದು ಧ್ವಜಾರೋಹಣ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ, ನಿಕಟಪೂರ್ವಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಚ್ಚುತ್ತ ಮಾಸ್ಟರ್ ತೇರ್ಥಮಜಲು, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ, ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಹಲ್ದಡ್ಕ, ಸೇರಿದಂತೆ ದೇವಾಲಯದ ವಿವಿಧ ಸಮಿತಿಗಳ ಸದಸ್ಯರು, ವ್ಯವಸ್ಥಾಪನ ಸಮಿತಿ ಸದಸ್ಯರು, ಹಾಗೂ ಭಕ್ತರು ಉಪಸ್ಥಿತರಿದ್ದರು.
ಎ.8ರಂದು ಪೂರ್ವಾಹ್ನ 9ರಿಂದ ತೋಟಚಾವಡಿಯಲ್ಲಿ ದೇವರಿಗೆ ಬಲ್ಲಾಳರ ಕಾಣಿಕೆ, ಉಳ್ಳಾಕುಳ ದರ್ಶನ, ರಾತ್ರಿ ಉತ್ಸವ ಬಲಿ ಪ್ರಾರಂಭ ಬಳಿಕ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಎ.9ರಂದು ಸಣ್ಣ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉಡ್ಕೆ ಬಲಿ ನಡೆಯಲಿದೆ.
ಎ.10ರಂದು ದರ್ಶನಬಲಿ, ಬಟ್ಟಲು ಕಾಣಿಕೆ, ಇತರ ಕಾರ್ಯಕ್ರಮಗಳ ಬಳಿಕ ಪಯ್ಯೋಳಿ ಹೊರಡುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಕಟ್ಟೆಪೂಜೆ ನಡೆಯಲಿದೆ.
ಎ.11ರಂದು ರಾತ್ರಿ ಅನ್ನಸಂತರ್ಪಣೆ, ಬಳಿಕ ತೋಟಚಾವಡಿಯಿಂದ ಉಳ್ಳಾಕುಳ ಮತ್ತು ಮಿತ್ತೂರು ನಾಯರ್ ಭಂಡಾರ ಬರುವುದು, ವಾಲಸಿರಿ ಉತ್ಸವ ನಂತರ ಕಟ್ಟೆ ಪೂಜೆಯಾಗಿ ಬಂದು ದೇವರಿಗೆ ಶಯನ ನಡೆಯಲಿದೆ.
ಎ.12ರಂದು ಆರಾಟ ಬಾಗಿಲು ತೆರೆಯುವುದು, ಅಭಿಷೇಕ, ಸಿಯಾಳ ಅಭಿಷೇಕ, ಕಟ್ಟೆಪೂಜೆ, ಅವಭೃತಸ್ನಾನ, ಶ್ರೀ ದೇವಳದ ತೆಂಕಂಗಣದಲ್ಲಿ ಬಟ್ಟಲು ಕಾಣೀಕೆ, ಗಂಧಪ್ರಸಾದ ನಂತರ ಧ್ವಜಾವರೋಹಣ ನಡೆಯಲಿದೆ.
ಎ. 12ರಂದು ಆರಟು ಬಾಗಿಲು ತೆರೆಯುವುದು, ಅಭಿಷೇಕ, ಸೀಯಾಳ ಅಭಿಷೇಕ ಮತ್ತು ಕ್ಷೀರಾಭಿಷೇಕ, ಮಹಾಪೂಜೆ, ಸಮಾರಾಧನೆ, ರಾತ್ರಿ ಉತ್ಸವ ಪ್ರಾರಂಭ, ಕಟ್ಟೆ ಪೂಜೆ, ಅವಭ್ರತ ಸ್ನಾನ, ತೆಂಕಂಗಣದಲ್ಲಿ ಬಟ್ಟಲು ಕಾಣಿಕೆ, ಗಂಧ-ಪ್ರಸಾದ ನಂತರ ಧ್ವಜಾವರೋಹಣ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ :
ಎ.10ರಂದು ಸಂಜೆ 6 ಗಂಟೆಯಿಂದ ಸ್ಥಳೀಯ ಶಾಲಾ ವಿದ್ಯಾಾರ್ಥಿಗಳಿಂದ ಮತ್ತು ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.