ಸುಳ್ಯ ಪೊಲೀಸ್ ಠಾಣೆಯಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆ ಗೊಂಡಿರುವ ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳು ಹಾಗೂ ಪೊಲೀಸ್ ಪೇದೆಗಳು, ಹಾಗೂ ಎ ಎಸ್ ಐ ರವರ ಬೀಳ್ಕೊಡುಗೆ ಸಮಾರಂಭ ಏ ೧೩ ರಂದು ಸುಳ್ಯ ಠಾಣಾ ಸಭಾಂಗಣದಲ್ಲಿ ನಡೆಯಿತು.
ಹೆಡ್ ಕಾನ್ಸ್ಟೇಬಲ್ ಮಮತ -ಮಹಿಳಾ ಠಾಣೆ ಪುತ್ತೂರು, ದಿನೇಶ್ -ಆಅಖಃ ಬೆಂಗಳೂರು, ನಾಗರಾಜ್ -ಸಿ ಐ ಡಿ ವಿಭಾಗ ಬೆಂಗಳೂರು, ಭವಿತ್ ರೈ -ಪುತ್ತೂರು ಗ್ರಾಮಾಂತರ, ಎ ಎಸ್ ಐ ನೇತ್ರಕುಮಾರ್ -ಮಹಿಳಾ ಠಾಣೆ ಪುತ್ತೂರು, ಸಂಧ್ಯಾಮಣಿ ಡಿಸಿಆರ್‌ಇ ಮಂಗಳೂರು, ಹೆಡ್ ಕಾನ್ಸ್ಟೇಬಲ್ ಧನಲಕ್ಷ್ಮಿ -ಸುಬ್ರಹ್ಮಣ್ಯ ಠಾಣೆಗಳಿಗೆ ವರ್ಗಾವಣೆ ಗೊಂಡಿದ್ದರು.
ಸುಳ್ಯ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ.ಯವರು ವರ್ಗಾವಣೆಗೊಂಡಿರುವ ಸಿಬ್ಬಂದಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿ ಬೀಳ್ಕೊಟ್ಟರು.
ಈ ಸಂಧರ್ಭದಲ್ಲಿ ಠಾಣೆಯ ಎಲ್ಲಾ ಸಿಬ್ಬಂದಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.