
ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಮತ್ತು ಕಲಾ ಮಂದಿರ್ ಡ್ಯಾನ್ಸ್ ಕ್ರೀವ್ ಪಂಜ ಇವುಗಳ ಸಹಯೋಗದಲ್ಲಿ ನಡೆಯುತ್ತಿರುವ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರದ ಎರಡನೇ ದಿನ ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಶ್ರೇಯಾಂಸ್ ಕುಮಾರ್ ಶೆಟ್ಟಿ ಮೂಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರಕ್ಕೆ ಶುಭ ಹಾರೈಸಿದರು.

ಪಟ್ಟಾಭಿರಾಮ ಸುಳ್ಯ, ರವೀಂದ್ರ ಐತಾಳ್, ಪ್ರಶೀಜ ಸುಳ್ಯ ಹಾಗೂ ಸಾಯಿ ಶೃತಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಮಿಮಿಕ್ರಿ, ಮಾತನಾಡುವ ಗೊಂಬೆ, ಯೋಗ ಹಾಗೂ ಹಾವು -ನಾವು ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳು ಮಕ್ಕಳನ್ನು ರಂಜಿಸಿತು.