ಕೆರೆಮೂಲೆಯಲ್ಲಿ ಭಾರಿ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಕಂಬ ಧರೆಗೆ

0

ಕೆರೆಮೂಲೆ ಪರಿಸರದಲ್ಲಿ ಇಂದು ಸಂಜೆ ಭಾರಿ ಗಾಳಿ ಮಳೆಗೆ ಮರ ಒಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ವರದಿಯಾಗಿದೆ.

ವಿದ್ಯುತ್ ಕಂಬ ರಸ್ತೆಗೆ ಅಡ್ಡ ಲಾಗಿ ಬಿದ್ದಿದ್ದು ಈ ಸಂದರ್ಭ ರಸ್ತೆಯಲ್ಲಿ ಯಾವುದೇ ವಾಹನ ಅಥವಾ ಸ್ಥಳೀಯ ನಿವಾಸಿಗಳು ಇಲ್ಲದ ಕಾರಣ ಅಪಾಯ ತಪ್ಪಿದೆ.


ಈ ಪ್ರದೇಶದಲ್ಲಿ ಸ್ಥಳೀಯ ಮನೆಗಳ ಮಕ್ಕಳು ಆಟ ವಾಡಿ ಕ್ಕೊಂಡಿರುವ ಸ್ಥಳ ವಾಗಿದ್ದು ಮಳೆ ಬರುತ್ತಿದ್ದ ಕಾರಣ ಅಲ್ಲಿ ಯಾರು ಇರಲಿಲ್ಲ ಎಂದು ಸ್ಥಳೀಯರು ಸುದ್ದಿಗೆ ತಿಳಿಸಿದ್ದಾರೆ.


ಅಲ್ಲದೆ ಈ ಮೊದಲು ಈ ಮರವನ್ನು ತೆರವು ಗೊಳಿಸಲು ಸ್ಥಳೀಯರು ಪಂಚಾಯತ್ ಗೆ ಮನವಿಯನ್ನು ಕೂಡ ಮಾಡಿಕ್ಕೊಂಡಿದ್ದರು ಎಂದು ತಿಳಿಸಿದ್ದಾರೆ.