ನಿಂತಿಕಲ್ಲಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಜಯಂತಿ

0

ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ. ಇದರ ವತಿಯಿಂದ ನಿಂತಿಕಲ್ಲಿನಲ್ಲಿ
ಅಂಬೇಡ್ಕರ್ ಜಯಂತಿ ಹಾಗೂ ಸುಳ್ಯ ತಾಲೂಕು ಸಮಿತಿಯ ಸಭೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ದ, ಸಂ, ಸ ಜಿಲ್ಲಾ ಸಂಚಾಲಕರಾದ ಕೃಷ್ಣಪ್ಪ ಸುಣ್ಣಾಜೆಯವರು ಡಾIIಬಿ.ಆರ್.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪ ಆರ್ಚನೆ ಮಾಡಿ ಹಾಗೂ ಸಭೆಯನ್ನು ಉದ್ಧೇಶಿಸಿ ಅಂಬೇಡ್ಕರ್ ಜಯಂತಿಯ ಬಗ್ಗೆ ಮಾತಾನಾಡಿದರು , ಜಿಲ್ಲಾ ಸಂಚಾಲಕರಾದ (ತಾಲೂಕು ಉಸ್ತುವಾರಿ) ಸುಂದರ ನಿಡ್ಪಳ್ಳಿಯವರ ಉಪಸ್ಥಿತಿಯಲ್ಲಿ ಸಮಿತಿಯನ್ನು ರಚಿಸಲಾಯಿತು.


ತಾಲೂಕು ಸಂಚಾಲಕರಾಗಿ ರಾಮಚಂದ್ರ ಕುರಿಯ ಮನೆ ಮುಪ್ಪೆರ್ಯ,
ಸಂಘಟನಾ ಸಂಚಾಲಕರಾಗಿ
ರವೀಂದ್ರ ಅನೋವು ಗುಂಡಿ, ಮಹೇಶ್ ಪೋದೆ, ಶ್ರೀನಿವಾಸ ನಿಂತಿಕಲ್ಲು,ಶ್ರೀಮತಿ ಲತಾ ರಾಘವೇಂದ್ರ ಬಳ್ಪ, ಬಿಜಿಲ ಅಲೆಕ್ಕಾಡಿ, ಬಾಬು ನಾಯ್ಕ ಪೋದೆ, ಅಣ್ಣಪ್ಪ ಪೊಳೆಂಜ ಐವತ್ತೊಕ್ಲು .
ಖಜಾಂಜಿಯಾಗಿ ಚೋಮ ನಾಯ್ಕ ನಿಂತಿಕಲ್ಲು ಇವರುಗಳನ್ನು ಆಯ್ಕೆಮಾಡಿ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು.