Home Blog Page 2

ಒಡ ಹುಟ್ಟಿದ ಅಣ್ಣ ತಂಗಿಗೆ ಮನೆ ನಿರ್ಮಿಸಿ ಕೊಟ್ಟ ಹರಿಹರ ಪಲ್ಲತಡ್ಕ ದ ಸಚಿನ್ ಕ್ರೀಡಾ ಸಂಘದ ಸಹೋದರರು

0

ಹರಿಹರ ಪಲ್ಲತಡ್ಕದ ಮಿತ್ತಮಜಲಿನಲ್ಲಿ ವಾಸವಿರುವ ಅಶಕ್ತ ಶಿವರಾಮ ಆಚಾರ್ಯ, ರತ್ನವತಿ ಆಚಾರ್ತಿ ಸಹೋದರ ಸಹೋದರಿಗೆ ಸಚಿನ್ ಕ್ರೀಡಾ ಸಂಘ ಸದಸ್ಯರು ಮನೆ ನಿರ್ಮಿಸಿ ಕೊಟ್ಟಿದ್ದು ಅದರ ಹಸ್ತಾಂತರ ಕಾರ್ಯ ಮೇ.1 ರಂದು ನಡೆಯಿತು.

ದಾನಿಗಳ ಸಹಕಾರದಲ್ಲಿ ಮನೆ ನಿರ್ಮಿಸಿ ಕೊಟ್ಟ ಸಚಿನ್ ಕ್ರೀಡಾ ಸಂಘ ಮನೆ ನಿರ್ಮಿಸಿ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ಮನೆ ಹಸ್ತಾಂತರಿಸಿದರು.

ಗಿರೀಶ್ ಆಚಾರ್ಯ ಅವರು ಮನೆಯ ಗುತ್ತಿ ಪೂಜೆ ನೆರವೇರಿಸಿದರು. ಕೇಶವಮೂರ್ತಿ ಪಲ್ಲತಡ್ಕ ಅವರು ಗಣಹವನ ನಡೆಸಿಕೊಟ್ಟರು. ಸಚಿನ್ ಕ್ರೀಡಾ ಸಂಘದ ಅಧ್ಯಕ್ಷ ಪ್ರದೀಪ್ ಕಜ್ಜೋಡಿ, ಕಾರ್ಯದರ್ಶಿ, ಕೋಶಾಧಿಕಾರಿಹಾಗೂ ಸರ್ವ ಸದಸ್ಯರು, ದಾನಿಗಳು ಉಪಸ್ಥಿತರಿದ್ದರು.

ಶುಭವಿವಾಹ : ಧೀರಜ್- ಕೃತಿ

0

ದೇವಚಳ್ಳ ಗ್ರಾಮದ ದೊಡ್ಡಕಜೆ ಮನೆ ಹೂವಪ್ಪ ಗೌಡ ಮತ್ತು ಶ್ರೀಮತಿ ಧರ್ಮಾವತಿರವರ ಪುತ್ರ ಧೀರಜ್ ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ಮೂಲೆಮಜಲು ಮನೆ ವೀರೇಂದ್ರಕುಮಾರ್ ಮತ್ತು ಶ್ರೀಮತಿ ಜಯಲಕ್ಷ್ಮೀರವರ ಪುತ್ರಿ ಕೃತಿಯವರೊಂದಿಗೆ ಎ.22ರಂದು ಕಾರ್ಯತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಮೇ.2: ಬಾಳುಗೋಡಿನ ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

0

ಬಾಳುಗೋಡಿನ ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವ ಹಾಗೂ ಸಹ ಪರಿವಾರಗಳ ವಾರ್ಷಿಕ ನೇಮೋತ್ಸವ ಮೇ. 2ರಂದು ನಡೆಯಲಿದೆ.
ಅಂದು ಪರಿವಾರ ದೈವಗಳಾದ ಬ್ರಹ್ಮರು, ನುಗ್ಗ ಮದಿಮಾಳ್, ಮಣಿ ಗೋವಿಂದ, ಗಿಳಿರಾಮ,
ಪೊಟ್ಟ, ಪೊರಾಂದಾಯ, ಪುರುಷ, ಕರಿನಾಯಕ, ಬೇಡವ, ಬಚ್ಚನಾಯಕ, ಮಣಿಪಂತ ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ
ಅಡಿಮಂತಾಯ ಹಾಗೂ ಗುಳಿಗ ದೈವಗಳ ವಾರ್ಷಿಕ ನೇಮೋತ್ಸವವು ಜರುಗಲಿರುವುದು.


ಮೇ. 1 ರ ಸಂಜೆ ಗಂಟೆ 3.00 ಕ್ಕೆ ಬೆಟ್ಟುಮಕ್ಕಿಯಲ್ಲಿ ಗ್ರಾಮಸ್ಥರು ಸೇರಿ ಭಂಡಾರ ಹಿಡಿದು ಶಿರಾಡಿ ಬದಿ ಕಂಚಾರಕ್ಕೆ ಹೋಗುವುದು. ತಂಬಿಲಾದಿ ಸೇವೆ ನಡೆಯಲಿದೆ. ಮೇ. 2ರ ಬೆಳಗ್ಗೆ ಗಂಟೆ 6.00 ನೇಮ ಪ್ರಾರಂಭ ಆಗುವುದು.11.00 ಗಂಟೆಯಿಂದ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 12.30 ಕ್ಕೆ ಗಡಿಗೆ ಹೋಗುವುದು. ಮಧ್ಯಾಹ್ನ ಗಂ.1.00 ರಿಂದ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮೇ. 4 ರಂದು ವಾರ್ಷಿಕ ತಂಬಿಲ ನಡೆಯಲಿದೆ.

ಶುಭವಿವಾಹ : ಡೀಲಾಕ್ಷ-ನವ್ಯಶ್ರೀ

0

ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಮುಳುಗಾಡು ಶ್ರೀಮತಿ ಪುಪ್ಪಾವತಿ ಮತ್ತು ಭವಾನಿಶಂಕರ ಗೌಡರ ಪುತ್ರಿ ನವ್ಯಶ್ರೀ ಇವರ ವಿವಾಹವು ಸಕಲೇಶಪುರ ತಾಲೂಕು ಬಿಸಿಲೆ ಗ್ರಾಮದ ಮ್ಯಾಗಡಹಳ್ಳಿ ಶ್ರೀಮತಿ ಮೀನಾಕ್ಷಿ ಮತ್ತು ನಿಂಗರಾಜು ಗೌಡರ ಪುತ್ರ ಡೀಲಾಕ್ಷರೊಂದಿಗೆ ಎ.22 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಸಭಾಭವನದಲ್ಲಿ ನಡೆಯಿತು.

ಶುಭವಿವಾಹ : ಪ್ರಕಾಶ್-ಪವಿತ್ರ

0

ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಪಡೆಜಾರು ಮನೆ ದುಗ್ಗಣ್ಣ ಗೌಡರ ಪುತ್ರ ಪ್ರಕಾಶರವರ ವಿವಾಹವು ಕಡಬ ತಾಲೂಕು ಐನೆಕಿದು ಗ್ರಾಮದ ನೆತ್ತರಡ್ಕ ಮನೆ , ಮೋನಪ್ಪ ಗೌಡರ ಪುತ್ರಿ ಪವಿತ್ರರವರೊಂದಿಗೆ ಗುತ್ತಿಗಾರಿನ ಶ್ರೀ ದೇವಿ ಸಿಟಿ ಹಾಲ್‌ನಲ್ಲಿ ಎ.28ರಂದು ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಎಸ್. ಜೆ. ಯೇಸುರಾಜ್

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ಎಸ್ .ಜೆ ಯೇಸುರಾಜ್ ಎ.30 ರಂದು ಅಧಿಕಾರ ಸ್ವೀಕರಿಸಿದರು. ರಾಮನಗರ ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಕುಕ್ಕೆ ದೇವಳದ ನೂತನ ಎಇಒ ಆಗಿ ಸರಕಾರ ನೇಮಿಸಿತ್ತು. ನೂತನ ಎಇಒ ಅವರಿಗೆ ಪ್ರಭಾರ ಎಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ನೂತನ ಎಇಒ ಯೇಸುರಾಜ್ ಅವರನ್ನು ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಸ್ವಾಗತಿಸಿದರು. ಇದೇ ಸಂದರ್ಭ ನಿರ್ಗಮನ ಎಇಒ ಪರಮೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸುವ ಮೂಲಕ ಬೀಳ್ಕೊಡಲಾಯಿತು.
ಈ ಸಂದರ್ಭ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಭಿಯಂತರ ಉದಯ ಕುಮಾರ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶ್ರೀ ದೇವಳದ ಮಹೇಶ್ ಕುಮಾರ್.ಎಸ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶುಭವಿವಾಹ : ವಿಜಯಕುಮಾರ್-ಗಾಯತ್ರಿ

0

ಬಾಳುಗೋಡು ಗ್ರಾಮದ ಮೂಲೆಗದ್ದೆ ಶ್ರೀಮತಿ ದಿ.ಪುಷ್ಪಾವತಿ ಮತ್ತು ನಾರಾಯಣ ರವರ ಪುತ್ರ ವಿಜಯಕುಮಾರ ರವರ ವಿವಾಹವು ಕಾರ್ಕಳ ತಾ.ರೆಂಜಾಳ ಗ್ರಾಮದ ದಡ್ಡುಮನೆ ಶ್ರೀಮತಿ ಕಮಲ ಮತ್ತು ದಿ.ರಾಜು ರವರ ಪುತ್ರಿ ಗಾಯತ್ರಿಯವರೊಂದಿಗೆ ಎ.18ರಂದು ಹರಿಹರಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.

ಉಬರಡ್ಕದಲ್ಲಿ ಮೇ.4 ರಂದು ನಾಯಿದ ಬೀಲ ನಾಟಕ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಿರಿ ಸಹಕಾರ ಸೌಧ ಲೋಕಾರ್ಪಣೆ ಮತ್ತು ಸನ್ಮಾನ ಸಮಾರಂಭವು ಮೇ.4 ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಚಾ.ಪರ್ಕ ಕಲಾವಿದರಿಂದ ಕಾಪಿಕಾಡ್, ಬೋಳಾರ್, ವಾಮಂಜೂರು ಅಭಿನಯದ ನಾಯಿದ ಬೀಲ ನಾಟಕ ಹಾಗೂ ಜಿಲ್ಲೆಯ ಪ್ರಸಿದ್ಧ ಗಾಯಕರಿಂದ ಸಂಗೀತ ರಸಮಂಜರಿ ನಡೆಯಲಿದೆ.

ಸಂಪಾಜೆಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ರಂಗ ಶಿಬಿರ

0

ರಂಗಮಯೂರಿ ಕಲಾಶಾಲೆ (ರಿ.)ಸುಳ್ಯ ಪ್ರಸ್ತುತ ಪಡಿಸುವ ಶ್ರೀ ಭಗವಾನ್ ಸಂಘ ಊರುಬೈಲು ಸಹಯೋಗದೊಂದಿಗೆ ರಂಗಶಿಬಿರ ೨೦೨೪ ಶ್ರೀ ಪಂಚಲಿಗೇಶ್ವರ ದೇವಸ್ಥಾನ ಸಂಪಾಜೆ ಇಲ್ಲಿ ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ರಾಜಾರಾಮ್ ಕಳಗಿ, ಪ್ರಶಾಂತ್ ಊರುಬೈಲು ಕಾರ್ಯದರ್ಶಿಗಳು ಶ್ರೀ ಭಗವಾನ್ ಸಂಘ ಊರುಬೈಲು ಉಪಸ್ಥಿತರಿದ್ದರು.
ರಂಗಮಯೂರಿ ಕಲಾಶಾಲೆ ನಿರ್ದೇಶಕರಾದ ಲೋಕೇಶ್ ಊರುಬೈಲು ಸ್ವಾಗತಿಸಿದರು, ವಿದ್ಯಾರ್ಥಿ ಸಿಂಚನ ಪುತ್ತಿಲ ವಂದನಾರ್ಪಣೆಗೈದರು ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ,ರಂಗಾಟಗಳು , ರಂಗಗೀತೆ,ರಂಗನಡೆ ,ಮಾತುಗಾರಿಕೆ,ಅಭಿನಯ, ಆರ್ಟ್ &ಕ್ರಾಫ್ಟ್, ಪ್ರಥಮಚಿಕಿತ್ಸೆ, ಇವುಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಗುವುದು ಸಂಪನ್ಮೂಲ ವ್ಯಕ್ತಿಗಳಾಗಿ ಹೇಮಂತ್ ಕುಮಾರ್ ಬೆಂಗಳೂರು, ಶ್ರೀ ಮತಿ ಪೂರ್ಣಿಮಾ ಚೊಕ್ಕಾಡಿ, ದೇವಿಪ್ರಸಾದ್ ಕಾಯರ್ತೋಡಿ, ಮೇಘಕೃಷ್ಣ ಕಾಯರ್ತೋಡಿ, ಹವ್ಯಶ್ರೀ ಕಲ್ಲಾಜೆ, ಶ್ರವಣ್ ಶೆಟ್ಟಿ ಉಪಸ್ಥಿತರಿದ್ದರು.

ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳಲ್ಲಿ ಮಿಂದೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ

0

ಭಕ್ತಿ ಭಾವದಿಂದ ಪಾಲ್ಗೊಂಡು ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತಾದಿಗಳು

ಸುಳ್ಯ: ತಾಲೂಕಿನ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶೀ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಿತು.

ಹಲವು ದಿನಗಳಿಂದ ಕಾತರ, ಕುತೂಹಲ ಹಾಗೂ ಭಕ್ತ ಭಾವದಿಂದ ಕಾಯುತ್ತಿದ್ದ ಕ್ಷಣಗಳಿಗೆ ಕೊನೆಗೂ ಮುಹೂರ್ಯ ಕೂಡಿ ಬಂದಿತು. ಬೆಳಿಗ್ಗೆ 10.18 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಮಹಾವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತ್ರತ್ವದಲ್ಲಿ ಈ ಪ್ರತಿಷ್ಠಾ ವಿಧಿ, ವಿಧಾನಗಳು ನೆರವೇರಿದವು.

ಇದೇ ವೇಳೆ ದೇಗುಲದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಶ್ರೀ ದುರ್ಗಾ ಮಾತೆಯ ವಿಗ್ರಹದ ಪ್ರತಿಷ್ಠಾ ಕಾರ್ಯಗಳು ನೆರವೇರಿದವು. ಬಳಿಕ ಪ್ರತಿಷ್ಠಾಪಿಸಲಾದ ದೇವರ ವಿಗ್ರಹಗಳಿಗೆ ಬ್ರಹ್ಮಕಲಶಾಭಿಷೇಕ ನಡೆಸಲಾಯಿತು. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಸಂಖ್ಯಾತ ಭಕ್ತರು ಈ ಪ್ರತಿಷ್ಠಾ ಕಾರ್ಯಕ್ಕೆ ಸಾಕ್ಷಿಗಳಾಗಿ ಪುನೀತರಾದರು.

ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮೊದಲು ಮುಂಜಾವು 5.30 ಕ್ಕೆ 108 ತೆಂಗಿನ ಕಾಯಿಯ ಗಣಪತಿ ಹೋಮ ನಡೆಸಲಾಯಿತು. ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಳಿಕ ಪ್ರತಿಷ್ಠಾ ಬಲಿ, ಮಹಾ ಪೂಜೆ, ಮಹಾ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಅನ್ನ ಸಂತರ್ಪಣೆಯಲ್ಲಿ ಅಸಂಖ್ಯಾತ ಭಕ್ತ ಜನರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ಮಾತೃ ಸಮಿತಿಯ ಸಂಚಾಲಕಿ ವಿನುತಾ ಪಾತಿಕಲ್ಲು, ವೈದಿಕ ಸಮಿತಿಯ ಸಂಚಾಲಕ ಎ.ಕೆ ಮಣಿಯಾಣಿ ಹಾಗೂ ಎಲ್ಲಾ ಉಪ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು ಉಪಸ್ಥಿತರಿದ್ದರು.

ಎಪ್ರಿಲ್ 2 ರ ಗುರುವಾರ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ದರ್ಶನ ಬಲಿ ಉತ್ಸವ ನಡೆಯಲಿದೆ.

error: Content is protected !!
Breaking