Home Blog Page 3

ಶುಭವಿವಾಹ : ಶ್ರೀಕಾಂತ್ ಕೆ.ಬಿ-ರಕ್ಷಿತಾ ಎನ್.ಪಿ

0

ಆಲೆಟ್ಟಿ ಗ್ರಾಮದ ನೆಡ್ಚೀಲು ಮನೆ ಶ್ರೀಮತಿ ಸತ್ಯಾವತಿ ಮತ್ತು ಪದ್ಮನಾಭ ರವರ ಪುತ್ರಿ ರಕ್ಷಿತಾ ರವರ ವಿವಾಹವು ಕಡಬ ತಾ.ಐನೆಕಿದು ಗ್ರಾಮದ ಕುಜುಂಬಾರು ಮನೆ ಶ್ರೀಮತಿ ದುರ್ಗಾಕ್ಷಿ ಮತ್ತು ಬೆಳ್ಯಪ್ಪ ಗೌಡರ ಪುತ್ರ ಶ್ರೀಕಾಂತ್‌ರೊಂದಿಗೆ ಎ.28ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಶುಭವಿವಾಹ : ರೂಪೇಶ್(ಪ್ರಶಾಂತ್)-ಸ್ವಾತಿ

0

ಸುಳ್ಯ ತಾ.ಕನಕಮಜಲು ಗ್ರಾಮದ ಮಳಿಮನೆ ಶ್ರೀಮತಿ ಸುಶೀಲ ಮತ್ತು ದಿ.ಬಾಲಣ್ಣ ಗೌಡರ ಪುತ್ರಿ ಸ್ವಾತಿಯವರ ವಿವಾಹವು ಬೆಳ್ತಂಗಡಿ ತಾ.ನಡ ಗ್ರಾಮದ (ಹೊಕ್ಕಿಲ) ಪವಿತ್ರ ನಿಲಯದ ಚಂದ್ಕೂರು ಶ್ರೀಮತಿ ರತ್ನಾವತಿ ಮತ್ತು ಲೊಕೇಶ್ ಗೌಡರ ಸುಪುತ್ರ ರೂಪೇಶ್ (ಪ್ರಶಾಂತ್)ರೊಂದಿಗೆ ಎ.28ರಂದು ಬಂಟರ ಭವನ ಕೇರ್ಪಳದಲ್ಲಿ ನಡೆಯಿತು.

ಸುಳ್ಯದ ಮುಖ್ಯರಸ್ತೆ ಕಟ್ಟೆಕಾರ್ ಜಂಕ್ಷನ್ ಬಳಿ ರಸ್ತೆಯಲ್ಲಿ ಹರಿಯುತ್ತಿದೆ ಕೊಳಚೆ ನೀರು

0

ಸುಳ್ಯ ಮುಖ್ಯ ರಸ್ತೆ ಕಟ್ಟೆಕಾರ್ ಜಂಕ್ಷನ್ ಬಳಿ ಮ್ಯಾನ್ ಹೋಲ್ ನಿಂದ ಹೊರಬಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.


ಒಂದು ವಾರದ ಹಿಂದೆ ಇದೇ ರೀತಿ ಕೊಳಚೆ ನೀರು ಹರಿಯಲು ಪ್ರಾರಂಭವಾಗಿದ್ದು ಅದನ್ನು ದುರಸ್ಥಿ ಪಡಿಸಲಾಗಿತ್ತು ಆದರೆ ಇವತ್ತು ಪುನ: ಕೊಳಚೆ ನೀರು ಮ್ಯಾನ್ ಹೋಲ್ ನಿಂದ ಹೊರಹೊಮ್ಮಿ ರಸ್ತೆಯಲ್ಲಿ ಹರಿಯುತ್ತಿದೆ.ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.

ಶುಭವಿವಾಹ : ಲತೀಶ್-ಜಶ್ಮಿ

0

ಸುಳ್ಯ ತಾ.ಕಸಬಾ ಗ್ರಾಮದ ಪಿಲಿಕಜೆ ಮನೆ ಕೇರ್ಪಳ ಶ್ರೀಮತಿ ಗೀತಾ ಮತ್ತು ಜಯರಾಮ ಗೌಡರ ಪುತ್ರ ಲತೀಶ್‌ರವರ ವಿವಾಹವು ಮಡಿಕೇರಿ ತಾ.ತಣ್ಣಿಮಾನಿ ಗ್ರಾಮದ ಬೆಳ್ಳಿಪ್ಪಾಡಿ ಮನೆ ಶ್ರೀಮತಿ ಜಯಲಕ್ಷ್ಮಿ ಮತ್ತು ನಾಗರಾಜ ಗೌಡರ ಪುತ್ರಿ ಜಶ್ಮಿಯವರೊಂದಿಗೆ ಎ.28ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.

ಶುಭವಿವಾಹ : ಶ್ರೀನಿವಾಸ ಉಪಾಧ್ಯಾಯ-ಹರ್ಷಿತಾ

0

ಸುಳ್ಯ ಕಸಬಾ ಗ್ರಾಮದ ದುಗಲಡ್ಕ ಕಲ್ದಂಬೆ ಶ್ರೀಮತಿ ನಯನಶ್ರೀ ಮತ್ತು ರಾಘವೇಂದ್ರ ಕಣ್ಣರಾಯರವರ ಪುತ್ರಿ ಹರ್ಷಿತಾರವರ ವಿವಾಹವು ಉಡುಪಿ ಜಿಲ್ಲೆ ಉಚ್ಚಿಲ ಗ್ರಾಮದ ಶ್ರೀ ನಿವಾಸದಲ್ಲಿರುವ ರಾಘವೇಂದ್ರ ಮತ್ತು ಶ್ರೀಮತಿ ಸುಗುಣರವರ ಪುತ್ರ ಶ್ರೀನಿವಾಸ ಉಪಾಧ್ಯಾಯ ರವರೊಂದಿಗೆ ಎ.28ರಂದು ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಸೋನಾ ಆಡ್ಕಾರ್ ಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ

0

ಸೋನಾ ಆಡ್ಕಾರ್ ಗೆ ರೋಟರಿ ಕ್ಲಬ್ ವತಿಯಿಂದ ಸನ್ಮಾನ ಕಾರ್ಯಕ್ರಮವು ಎಪ್ರಿಲ್ 17ರಂದು ನಡೆಯಿತು.
ಸೋನಾ ಅಡ್ಕಾರ್ ನಾಲ್ಕನೇ ವರ್ಷದಿಂದ ನೃತ್ಯ, ಹುಲಿವೇಷ ಕುಣಿತ, ಡ್ರಾಯಿಂಗ್, ಯೋಗಭ್ಯಾಸ ಮತ್ತು ಪ್ರದರ್ಶನ ಹೀಗೆ ಇವರ ಹಲವಾರು ಪ್ರತಿಭೆಗಳನ್ನು ಗುರುತಿಸಿ ರೋಟರಿ ರಾಜ್ಯಪಾಲರಿಂದ ಮತ್ತು ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.


ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಜಾಲ್ಸೂರು ಗ್ರಾಮದ ಅಡ್ಕಾರ್ ಮನೆತನದ ಶರತ್ ಅಡ್ಕಾರ್ ಮತ್ತು ಶೋಭಾ ಶರತ್ ರವರ ಪುತ್ರಿ. ಈಕೆ ನೃತ್ಯಭ್ಯಾಸವನ್ನು ಸಂತೋಷ್ ಮತ್ತು ತರುಣ್ ರಾಜ್ ರವರಿಂದ, ಹುಲಿ ಕುಣಿತವನ್ನು ತರುಣ್ ರಾಜ್ ಮಂಗಳೂರು ರವರಿಂದ, ಯೋಗಭ್ಯಾಸವನ್ನು ಸಂತೋಷ್ ಮುಂಡೋಕಜೆಯವರಿಂದ ಪಡೆಯುತ್ತಿದ್ದಾಳೆ.

ಅಂತರಾಷ್ಟ್ರ ಮಟ್ಟದ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ 5ನೇ ಸ್ಥಾನ

0

ಅಂತರಾಷ್ಟ್ರ ಮಟ್ಟದ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ಎ. 28 ರಂದು ಬೆಂಗಳೂರಿನಲ್ಲಿ ನಡೆದ ಟಿಸಿಎಸ್ ವಿಶ್ವ 10 ಕಿ.ಮೀ ರನ್ ನಲ್ಲಿ ದೇಶ ವಿದೇಶಗಳಿಂದ ಸುಮಾರು 28,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದರಲ್ಲಿ ಜಸ್ಮಿತಾ ಕೊಡೆಂಕಿರಿಯವರು 5 ನೆ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ನಡೆಯುವ ಪ್ರಮುಖ ಮ್ಯಾರಥಾನ್ ನಲ್ಲಿ ಇದು ಒಂದಾಗಿದೆ. ಜಸ್ಮಿತಾ ಕೊಡೆಂಕಿರಿಯವರು ಬಳ್ಪ ಗ್ರಾಮದ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪತ್ರಿ.

ಕೇನ್ಯ ಹೊಸಮನೆ ಶ್ರೀಮತಿ ವಿಜಯಗೋಪಾಲ ಶೆಟ್ಟಿ ನಿಧನ

0

ಕೇನ್ಯ ಹೊಸಮನೆ ಶ್ರೀಮತಿ ವಿಜಯಗೋಪಾಲ ಶೆಟ್ಟಿ
(ಬೆಂಗಳೂರು ) ಇಂದು ನಿಧನರಾದರು. ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ ನಿವೃತ್ತ ವಿಜಯ ಬ್ಯಾಂಕ್ ಎಜಿಎಂ ಗೋಪಾಲ ಶೆಟ್ಟಿ, ಮಗ, ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಕುಕ್ಕುಜಡ್ಕದ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮೂಕಾಂಬಿಕಾ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಅಮರಮುಡ್ನೂರಿನ ಕುಕ್ಕುಜಡ್ಕದ ಸಹಕಾರಿ ಸಂಘದ ವಾಣಿಜ್ಯ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ಮಂಜುನಾಥ್ ಕೆ ರವರ ಮಾಲಕತ್ವದ ಶ್ರೀ ಮೂಕಾಂಬಿಕಾ ಟ್ರೇಡರ್ಸ್ ಸ್ಥಳಾಂತರಗೊಂಡು ಕುಕ್ಕುಜಡ್ಕದ ಮುಖ್ಯ ರಸ್ತೆಯಲ್ಲಿರುವ ಪಂಚಾಯತ್ ಸದಸ್ಯ ಜಯಪ್ರಕಾಶ್ ದೊಡ್ಡಿಹಿತ್ಲು ರವರ ಮಾಲಕತ್ವದ ನೂತನ ಕಾಂಪ್ಲೆಕ್ಸ್ ನಲ್ಲಿ ಎ.29 ರಂದು ಶುಭಾರಂಭ ಗೊಂಡಿತು.


ಮಾಲಕರ ಪುತ್ರಿ ಕು.ಮೋನಿಶಾ ಕೆ ರಿಬ್ಬನ್ ಕತ್ತರಿಸಿ ಶುಭಾರಂಭ ಗೊಳಿಸಿದರು.
ಈ ಸಂದರ್ಭದಲ್ಲಿ
ಭಾಸ್ಕರ ಜಾಲ್ಸೂರು , ಗೋಪಾಲಕೃಷ್ಣ ,
ಶ್ರೀಮತಿ ಸಾವಿತ್ರಿ, ಶ್ರೀಮತಿ ಅಶ್ವಿನಿ,ಛಾಯಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಸಹ ಸಂಸ್ಥೆ ಮೂಕಾಂಬಿಕಾ ಫಾಸ್ಟ್ ಫುಡ್ ಸೆಂಟರ್ ನ ಮಾಲಕಿ ಶ್ರೀಮತಿ ಅನಿತ ಎಂ. ರವರು ಸ್ವಾಗತಿಸಿದರು.
ನೂತನ ಸಂಸ್ಥೆಯಲ್ಲಿ ಫ್ಯಾನ್ಸಿ ಐಟಂಗಳು ಹಾಗೂ ಫೂಟ್ ವೇರ್ಸ್, ಗಿಫ್ಟ್ ಐಟಂಗಳು ಲಭ್ಯವಿರುವುದು.

ಇಂದು ಮಂಡೆಕೋಲು ಮಹಾವಿಷ್ಣುಮೂರ್ತಿ ದೇವರಿಗೆ ಅಷ್ಢಬಂಧ ಬ್ರಹ್ಮಕಲಶೋತ್ಸವ

0

ಮಂಡೆಕೋಲು ಗ್ರಾಮ ದೇವರಾದ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಪುನಃ ಅಷ್ಠಬಂಧ ಬ್ರಹ್ಮಕಲಶೋತ್ಸವ ಇಂದು ನಡೆಯಲಿದೆ.

ಬೆಳಗ್ಗೆ 10.18ರ ಮಿಥುನ ಲಗ್ನದ ಶುಭ ಮುಹೂರ್ತ ದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ದುರ್ಗಾಂಬಿಕೆ ದೇವಿ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ನಿತ್ಯ ನೈಮಿತ್ಯ ನಿರ್ಣಯ ನಡೆಯುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯುವುದು.

error: Content is protected !!
Breaking