ವಳಲಂಬೆ ಶಾಲೆಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ವಳಲಂಬೆ ಶಾಲೆಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಧ್ವಜಾರೋಹಣ ಹಾಗೂ ಸಭಾಕಾರ್ಯಕ್ರಮ ನಡೆಯಿತು .ಎಸ್ ಡಿ ಎಂ ಸಿ ಅಧ್ಯಕ್ಷರಾದ ರವೀಶ್ ಕುಮಾರ್ ಮೊಟ್ಟೆಮನೆ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ. ಸದಸ್ಯರಾದ ವೆಂಕಟ್ ವಳಲಂಬೆ, ನಿವೃತ್ತ ಯೋಧರಾದ ಸೋಮಶೇಖರ ಮಾವಜಿ ,ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಅಭಿಲಾಶಾ ಮೋಟ್ನೂರು, ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಹೆಚ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪುರಸ್ಕಾರ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು . ನಂತರ ವಿದ್ಯಾರ್ಥಿಗಳಿಂದ ಭಾಷಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರಮಿಳಾ ಪಿ ಎಸ್ ಸ್ವಾಗತಿಸಿ ಗೌರವ ಶಿಕ್ಷಕಿ ತೇಜಾವತಿ ಡಿ ಧನ್ಯವಾದವಿತ್ತರು .ಸಹ ಶಿಕ್ಷಕಿ ಗೀತಾಲಕ್ಷಿ ಎ ಹಾಗೂ ಅತಿಥಿ ಶಿಕ್ಷಕಿ ನಳಿನಾಕ್ಷಿ ಪಿ ಎಸ್ ಕಾರ್ಯಕ್ರಮ ನಿರೂಪಿಸಿದರು.