ಏನೆಕಲ್ಲು: ಸೈಕಲ್ ಕಳ್ಳತನ

0

 

 

ದೂರು ದಾಖಲು, ಕಳ್ಳನನ್ನು ಹಿಡಿದುಕೊಡಲು ಮನವಿ

ಏನೆಕಲ್ಲಿನಲ್ಲಿ ಸೈಕಲ್ ಕಳ್ಳತನವಾಗಿದ್ದು, ಈ ಬಗ್ಗೆ ಪೊಲೀಸ್ ದೂರು ನೀಡಿದ ಘಟನೆ ವರದಿಯಾಗಿದೆ.

 

ಆ. 19 ರ ರಾತ್ರಿ ಯೇನೆಕಲ್ಲಿನ ಪ್ರಕೃತಿ ಹೋಟೆಲ್ ಮಾಲಿಕ ಭವಾನಿ ಶಂಕರ ಕೋಟಿ ಮನೆ ಅವರ ಮಗನ ಸೈಕಲ್ ಕಳ್ಳತನವಾಯಿತು. ಅದು Kross maximum ಹೆಸರಿನ ಹಸಿರು ಕಪ್ಪು ಬಣ್ಣದ ಸೈಕಲಾಗಿದ್ದು ಇತ್ತೀಚೆಗಷ್ಟೇ ಖರೀದಿಸಿದ್ದರು. ಸುಮಾರು 15 ಸಾವಿರ ಬೆಲೆ ಬಾಳುವ ಸೈಕಲ್ ಆಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಕೊರಲಾಗಿದೆ.