ಕಲ್ಲುಗುಂಡಿ  ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

0

 

ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅ.02 ರಂದು ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀಮತಿ ವನಿತ.ಬಿ ರವರ ಅಧ್ಯಕ್ಷತೆಯಲ್ಲಿ ಗಾಂಧಿ ಜಯಂತಿ ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಹೆಫ್ಸಿಭಾ ನಿರೂಪಣೆ ಮಾಡಿದರು . ವಿದ್ಯಾರ್ಥಿನಿ ಪ್ರಜ್ಞಾ ಕೆ.ಕೆ ಸ್ವಾಗತಿಸಿದರು . ವಿದ್ಯಾರ್ಥಿನಿ ರೀಶಲ್ ಡಿ ಸೋಜ ರವರು ಮಹಾತ್ಮ ಗಾಂಧೀಜಿ ಯವರ ಜೀವನ ಕುರಿತು ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಯಜ್ಞ ಮತ್ತು ತಂಡದವರು ರಘುಪತಿ ರಾಘವ ರಾಜಾರಾಮ್ ಭಜನೆ ಹಾಡಿದರು . ಎಲ್ಲಾ ಶಿಕ್ಷಕರು ಗಾಂಧೀಜಿಯವರ ಭಾವಚಿತ್ರಕ್ಕೆ ಹೂವು ಹಾಕಿ ಶ್ರದ್ಧಾಂಜಲಿ ಸಮರ್ಪಿಸಿದರು. ಮುಖ್ಯ ಶಿಕ್ಷಕಿ ಯವರು ಗಾಂಧೀಜಿಯವರ ಆದರ್ಶಗಳನ್ನು ತಿಳಿಸಿ ಅದರಂತೆ ನಡೆಯಲು ಕರೆ ಕೊಟ್ಟರು. ವಿದ್ಯಾರ್ಥಿನಿ ಸ್ವಿನಿಕ ಕ್ರಾಸ್ತಾ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಕೊನೆಗೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರಿಂದ ಶಾಲಾ ಪರಿಸರವನ್ನು ಸ್ವಚ್ಚಗೊಳಿಸಲಾಯಿತು.

LEAVE A REPLY

Please enter your comment!
Please enter your name here