
ಮುರುಳ್ಯ ಗ್ರಾಮದ ಉಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮೇ.25 ರಂದು ಪ್ರತಿಷ್ಠಾವರ್ಧಂತಿ ಉತ್ಸವವು ಮೂಡಬಿದಿರೆ ವೇದಮೂರ್ತಿ ಎನ್. ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಮೇ 24 ರಂದು ಬೆಳಿಗ್ಗೆ ಹೊರೆ ಕಾಣಿಕೆ ಸಮರ್ಪಣೆ ನಡೆದು, ಸಂಜೆ ವಾಸ್ತು, ರಾಕ್ಷೋಘ್ನ, ನವಗ್ರಹ ಹೋಮ ವಾಸ್ತು ಬಲಿ, ದಿಗ್ಬಲಿ ಕಾರ್ಯಕ್ರಮ ನಡೆಯಿತು.
ಮೇ 25 ರಂದು ಬೆಳಿಗ್ಗೆ ಗುರು ಗಣಪತಿ ಪೂಜೆ, ನಾಗಾಭಿಷೇಕ ಬಳಿಕ ದೇವರಿಗೆ ನವಕ ಕಲಹೋಮ, ಅಭಿಷೇಕ, ಪ್ರಸನ್ನ ಪೂಜೆ ನಡೆಯಿತು. ನಂತರ ದೇವರ ಪ್ರೀತ್ಯರ್ಥವಾಗಿ ಭದ್ರಕಾಳಿ ಹೋಮ, ಮಧ್ಯಾಹ್ನ ಪೂಜೆ ಪೂರ್ಣಾಹುತಿ ನಡೆದು ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
















ಸಭಾ ಕಾರ್ಯಕ್ರಮ ಬಳಿಕ ಎಣ್ಮೂರು ಸೀತಾ ರಾಮಾಂಜನೇಯ ಭಾರತಿ ಕುಣಿತ ಭಜನಾ ಮಂಡಳಿ ಮತ್ತು ಕಡಬ ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಸಬಳೂರು ರವರಿಂದ ಕುಣಿತ ಭಜನಾ ಕಾರ್ಯಕ್ರಮವನ್ನು ಅಶೋಕ್ಕುಮಾರ್ ರೈ, ವಸಂತ ನಡುಬೈಲು ರವರು ಉದ್ಘಾಟಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಕೇರ್ಪಡ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಮುರುಳ್ಯ ಸೊಸೈಟಿ ಉಪಾಧ್ಯಕ್ಷೆ ಕುಸುಮಾವತಿ ರೈ ಕೆ.ಜಿ., ನಿರ್ದೇಶಕರಾದ ರೂಪರಾಜ ರೈ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಕು.ಜಾನಕಿ ಮುರುಳ್ಯ ಮತ್ತು ಗ್ರಾ.ಪಂ. ಸದಸ್ಯರು, ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಅಶೋಕ್ಕುಮಾರ್ ರೈ, ಅನುವಂಶಿಕ ಆಡಳಿತದಾರ ಚಿನ್ನಯ್ಯ ಆಚಾರ್ಯ , ಪುರೋಹಿತ ಬಾಲಕೃಷ್ಣ ಆಚಾರ್ಯ, ಪುರುಷೋತ್ತಮ ಆಚಾರ್ಯ, ಜನಾರ್ದನ ಆಚಾರ್ಯ, ಧನಂಜಯ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.


(ವರದಿ: ಎಎಸ್ಎಸ್ ಅಲೆಕ್ಕಾಡಿ)









