ಅಜ್ಜಾವರ ಗ್ರಾ.ಪಂ. : ಗ್ರಾಮೀಣ ಬೇಸಿಗೆ ಶಿಬಿರ ಸಮಾರೋಪ

0

ಅಜ್ಜಾವರ ಗ್ರಾ.ಪಂ.ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ದ
ಮೇ. 22ರಿಂದ ಮೇ.26ರವರೆಗೆ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ಕೊನೆ ಗೊಂಡಿತು.


ಸಂಪನ್ಮೂಲ ವ್ಯಕ್ತಿಯಾಗಿ ಡಾನ್ಸ್ ಮಾಸ್ಟರ್ ವಿಜು ವಿಠಲರವರು ಆಗಮಿಸಿದ್ದರು. ಶಿಬಿರಕ್ಕೆ ಲೋಕೇಶ್ ಪಲ್ಲತ್ತಡ್ಕ ರವರು ಸಿಹಿ ತಿಂಡಿ ನೀಡಿ ಸಹಕರಿಸಿದ್ದರು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗ್ರಾ.ಪಂಚಾಯತ್ ಸದಸ್ಯರು ಮಾಡಿದರು.


ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆಯವರು ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷರಾದ ಲೀಲಾಮನಮೋಹನ, ಗ್ರಂಥಾಲಯ ಸಮಿತಿ ಸದಸ್ಯರು ಹಾಗೂ ಸಾವಯವ ಕೃಷಿಕರಾದ ಬೆಳ್ಯಪ್ಪ ಮುಡೂರು, ಗ್ರಂಥಾಲಯ ಸಮಿತಿ ಸದಸ್ಯರು ,ಮಹಿಳಾ ಸಾಹಿತಿಗಳಾದ ವಿಮಲಾರುಣ ಪಡ್ಡಂಬೈಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಎ.ಕೆ., ಯೂನಿಯನ್ ಬ್ಯಾಂಕಿನ ಬ್ಯಾಂಕ್ ಮಿತ್ರರಾದ ಸಾವಿತ್ರಿ ಜಯನ್, ಅಂಚೆ ಪಾಲಕರಾದ ಶಾಲಿನಿ ,ಶ್ರೀ ರಕ್ಷಾ ಸಂಜೀವಿನಿ ಸಂಘದ ಪ್ರೇರಕರಾದ ಜಯ ಶ್ರೀ, ಪಂಚಾಯತ್ ಸಿಬ್ಬ೦ದಿವರ್ಗ, ಪೋಷಕರು, ಊರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ42 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಕಾರ್ಯಕ್ರಮದ ಸುಗಮಗಾರರಿಗೆ ಪ್ರಶಂಸನಾ ಪತ್ರವಿತರಿಸಲಾಯಿತು.
ಕಾರ್ಯಕ್ರಮದ ನಿರ್ವಹಣೆಯನ್ನು ಶಿಬಿರಾರ್ಥಿಗಳಿ೦ದ ಮಾಡಿಸಲಾಗಿತ್ತು.ಪ್ರಾರ್ಥನೆಯನ್ನು ಪೂರ್ಣಚಂದ್ರ,ಧನ್ವಿ,ಭೂಮಿಕಾ,
ಜನಿತ್ ಮಾಡಿದರು.ಸ್ವಾಗತ ಲಿಖಿತ್,ಧನ್ಯವಾದವನ್ನು ಶ್ರೇಯಾ ಮಾಡಿದರು.5 ದಿನದ ಶಿಬರದ ವರದಿಯನ್ನು ಗ್ರಂಥಾಲಯ ಮೇಲ್ವಚಾರಕರಾದ ಲಕ್ಷ್ಮಿ ವಾಚಿಸಿದರು. ಶಿಬಿರದಲ್ಲಿ ಶಿಬಿರಾರ್ಥಿಗಳಾದ ತನುಶ್ರೀ,ಧನ್ವಿ,ಯಶ್ವಿತ ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಶೋಭ್ ಮಾಡಿದರು.ಕಾರ್ಯಕ್ರಮವು ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಕೊನೆಗೊಂಡಿತು.