ಪ್ರೆಸ್ ಕ್ಲಬ್ ಕಟ್ಟಡದಲ್ಲಿ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಕಛೇರಿ ಉದ್ಘಾಟನೆ

0

ಸುಳ್ಯ ಮಾರ್ನಿಂಗ್ ಕ್ರಿಕೆಟ್ ಕ್ಲಬ್ ಇದರ ದಶ ಸಂಭ್ರಮದ ಆಚರಣೆ ಸಲುವಾಗಿ ಸುಳ್ಯದ ಪ್ರೆಸ್ ಕ್ಲಬ್ ಕಟ್ಟಡದಲ್ಲಿ ನೂತನ ಕಚೇರಿಯನ್ನು ತೆರೆಯಲಾಯಿತು.
ಕಚೇರಿಯ ಉದ್ಘಾಟನೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ನೆರವೇರಿಸಿದರು.


ಮಾರ್ನಿಂಗ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷ ಗಿರೀಶ್ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಜೆ.ಕೆ.ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಪ್ರೆಸ್ ಕ್ಲಬ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಮುಖ್ಯ ಅತಿಥಿಯಾಗಿದ್ದರು.


ಎಂಸಿಸಿ ಕಾರ್ಯದರ್ಶಿ ಸಂತೋಷ್ ಕುಮಾರ್ ಜಟ್ಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಇಸಾಕ್ ವಂದಿಸಿದರು. ಎಂಸಿಸಿ ಸ್ಥಾಪಕಾಧ್ಯಕ್ಷ ಹಂಸ ಖಾತೂನ್, ಪತ್ರಕರ್ತರಾದ ದಯಾನಂದ‌ ಕಲ್ನಾರ್, ಎಂಸಿಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.