














ಸೃಜನಶೀಲತೆ ಹಾಗೂ ಕ್ರಿಯಾಶೀಲತೆ ಬೆಳೆಯಬೇಕಾದರೆ ಸಾಹಿತ್ಯದ ಓದು ಪ್ರತಿಯೊಬ್ಬನಿಗೂ ಅಗತ್ಯವಾಗಿ ಬೇಕಾಗಿದೆ. ಆಧುನಿಕ ಜಗತ್ತಿನ ಧಾವಂತದ ಬದುಕಿನಲ್ಲಿ ತನ್ನತನವನ್ನು ಕಳೆದು ಕೊಳ್ಳದಿರಲು ಸಾಹಿತ್ಯದ ಓದು ಹಾಗೂ ಚಟುವಟಿಕೆಗಳಲ್ಲಿ ತೊಡಗಿಕಲ್ಲಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನಡೆಯುವ ಈ ಕಥಾ ಕಮ್ಮಟ ಪೂರಕವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಪೇರಾಲ್ ಇವರು ಸರಕಾರಿ ಪ್ರಥಮ ಕಾಲೇಜು ಮತ್ತು ಅದರ ಅಂಗ ಸಂಸ್ಥೆಗಳು ಆದ ಕನ್ನಡ ಸಂಘ , ಐ ಕ್ಯೂ ಎ ಸಿ ವಿಭಾಗ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಡೆದ ಕಥಾ ಕಮ್ಮಟ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಇವರು ವಹಿಸಿದರು. ಕಥಾಕಮ್ಮಟವನ್ನು ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ನಡೆಸಿಕೊಟ್ಟರು. ವೇದಿಕೆಯಲ್ಲಿ ಐ ಕ್ಯೂ ಎ ಸಿ ವಿಭಾಗದ ಮುಖ್ಯಸ್ಥೆ ಶ್ರೀಮತಿ ಜಯಶ್ರೀ ಹಾಗೂ ಸಾಹಿತ್ಯ ಪರಿಷತ್ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ ಇವರು ಉಪಸ್ಥಿತರಿದ್ದರು.ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ರಾಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕುಮಾರಿ ದಿವಶ್ರೀ ಎಲ್ಲರನ್ನೂ ವಂದಿಸಿದರು. ವಿನಯ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.











