ಪಾಂಡಿಗದ್ದೆ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ
ಜಯರಾಮ ಕಂಬಳ ರವರಿಂದ
ಲೇಖನ ಪುಸ್ತಕ ವಿತರಣೆ ಕಾರ್ಯಕ್ರಮ ಜೂ.8ರಂದು ಜರುಗಿತು.
ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ದಾನಿಗಳಾದ ಜಯರಾಮ ಕಂಬಳ, ಎಸ್. ಡಿ. ಎಂ. ಸಿ ಉಪಾಧ್ಯಕ್ಷೆ ಉಷಾ ಕಂಬಳ, ಮುಖ್ಯೋಪಾಧ್ಯಾಯ ಯಶೋಧರ ಕೆ, ಪೋಷಕರು, ವಿದ್ಯಾರ್ಥಿಗಳು, ಭಾಗವಹಿಸಿದ್ದರು.
















ಜಯರಾಮ ಕಂಬಳ ರವರು
ನಿರಂತರ ಮೂರು ವರ್ಷಗಳಿಂದ ಇಡೀ ಶೈಕ್ಷಣಿಕ ವರ್ಷಕ್ಕೆ ಬೇಕಾದ ಲೇಖನ ಪುಸ್ತಕಗಳು ನೀಡುತ್ತಾ ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕಿ ವಿಂದ್ಯಾ ಕೆ. ಸ್ವಾಗತಿಸಿದರು.
ಸಹಶಿಕ್ಷಕ ಅಶೋಕ್ ಕುಮಾರ್ ವಂದಿಸಿದರು.










