ಸುಳ್ಯ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಕಲ್ಕುಡ ದೈವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥನೆ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸುಳ್ಯದ ಕಾರಣಿಕ ಸಾನಿಧ್ಯ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು.


ಮಳೆಗಾಲ ಆರಂಭವಾಗಿ ಬಹಳ ದಿನಗಳು ಕಳೆದರೂ ಮಳೆ ಬಾರದಿರುವುದರಿಂದ ನೀರಿನ ಅಭಾವ ಕಂಡು ಬಂದಿದ್ದು ಮಳೆಯನ್ನೇ ನಂಬಿ ಕೃಷಿ ಮಾಡಿದ ರೈತರು ಕಂಗೆಟ್ಟಿರುವ ಪರಿಸ್ಥಿತಿ ಇರುವುದನ್ನು ಮನಗಂಡು ದೈವಸ್ಥಾನದಲ್ಲಿ ತೆಂಗಿನ ಕಾಯಿ ಒಡೆದು ಸಂಘದ ವತಿಯಿಂದ ಪ್ರಾರ್ಥಿಸಲಾಯಿತು.


ದೈವಸ್ಥಾನದ ಪೂಜಾರಿ ತಿಮ್ಮಪ್ಪ ನಾವೂರು ಪ್ರಾರ್ಥಿಸಿ ಪ್ರಸಾದ ನೀಡಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಕಾರ್ಯದರ್ಶಿ ಜನಾರ್ದನ ದೋಳ, ಖಜಾಂಜಿ ಗೋಪಾಲ ನಡುಬೈಲು, ಶಾಂತಪ್ಪ ಡಿ, ಸತ್ಯನಾರಾಯಣ, ವಸಂತ ಪರಿವಾರಕಾನ ಮತ್ತಿತರರು ಉಪಸ್ಥಿತರಿದ್ದರು.