ಶ್ರೀ ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ ಉಬರಡ್ಕ ಮಿತ್ತೂರು, ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘ ದುಗಲಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಜು. 24 ರಂದು ಉಬರಡ್ಕ ನರಸಿಂಹ ಶಾಸ್ತಾವು ದೇವಸ್ಥಾನದ ಸಭಾಭವನದಲ್ಲಿ ವಿಶೇಷ ರಂಗಪೂಜೆ, ಯಕ್ಷ ದಶ ಸಂಭ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.















ಉಬರಡ್ಕ ಮಿತ್ತೂರಿನಲ್ಲಿ ನಾಟ್ಯ ತರಗತಿ ಪ್ರಾರಂಭಗೊಂಡು ಶ್ರೀ ನರಸಿಂಹ ಶಾಸ್ತಾವು ಮಕ್ಕಳ ಯಕ್ಷ ಕಲಾ ಸಂಘ ೧೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಸಂಘಟಿಸಿರುವುದಾಗಿ ಯಕ್ಷ ಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ ತಿಳಿಸಿದ್ದಾರೆ.
ಜು. ೨೪ರಂದು ಸಂಜೆ 5.3೦ರಿಂದ 7. 3೦ರ ತನಕ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 7.3೦ರಿಂದ ಶ್ರೀ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಲಿದ್ದು, ರಾತ್ರಿ 8.3೦ ರಿಂದ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಟ್ಟಿಪಳ್ಳ ಸ.ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಅವರನ್ನು ಸನ್ಮಾನಿಸಲಾಗುವುದು. ಶಾಸಕಿ ಭಾಗೀರಥಿ ಮುರುಳ್ಯ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಬಳಿಕ ವೀರ ಅಭಿಮನ್ಯು ಮತ್ತು ರತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.









