ಟ್ಯಾರೀಸ್ ಮೇಲೊಂದು ಸುಂದರ ತಾವರೆ & ಕಮಲ ತೋಟ ನಿರ್ಮಿಸಿದ ಬಿಇ, ಎಂಬಿಎ ಪದವೀಧರ ಮಂಜುಪ್ರಸಾದ್ ಕುರುಂಜಿ

0

ಇವರ ಮಾರುಕಟ್ಟೆಯೇ ಸೋಶಿಯಲ್ ಮೀಡಿಯಾ!

ಕೆಸರಿನಲ್ಲಿ ಅರಳಿದ ಕಮಲ ನೋಡೋಕೆ ಅಂದ. ಆದರೆ ತಾವರೆ ಬೇಕಾದ ಹಾಗೆ ಕಾಣಲು ಸಿಗೋದಿಲ್ಲ. ಆದರೆ ಮೂಲತಃ ಸುಳ್ಯ ತಾಲೂಕು ಅರಂತೋಡಿನ ಕುರುಂಜಿ ಮನೆಯ ಮಂಜುಪ್ರಸಾದ್ ಕುರುಂಜಿಯವರು
ತಮ್ಮ ಮನೆಯ ಟ್ಯಾರೀಸ್ ಅನ್ನೇ ಕಳೆದ 6 ವರ್ಷಗಳಿಂದ ತಾವರೆ & ಕಮಲಯ ತೋಟವನ್ನಾಗಿ ಮಾಡಿದ್ದಾರೆ.
ಇವರು ಪ್ರಸ್ತುತ ಮಂಗಳೂರಿನ ಪಡೀಲ್‌ನ ಬಜಾಲ್ ಎಂಬಲ್ಲಿ ನೆಲೆಸಿದ್ದು, ಬಿಇ, ಎಂಬಿಎ ಮುಗಿಸಿ, ಖಾಸಗಿ ಕಂಪೆನಿಯಲ್ಲಿ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದೆಲ್ಲದರ ನಡುವೆ ಇವರು ಕೃಷಿ ಪ್ರೇಮಿಯೂ ಹೌದು. ಇವರಿಗೆ ಚಿಕ್ಕಂದಿನಲ್ಲೇ ಪ್ರಾಣಿ, ಪಕ್ಷಿಗಳ ಮೇಲೆ ಹೆಚ್ಚು ಮಮತೆ ಇತ್ತು. ಹಾಗಾಗಿ ಮನೆಯಲ್ಲಿ ಅಲಂಕಾರಿಕ ಮೀನುಗಳುನ್ನು ಸಾಕುತ್ತಿದ್ದರು. ಅದಕ್ಕೆ ಪೂರಕವಾಗಿ ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ಬೆಳೆಸಲು ಪ್ರಾರಂಭಿಸಿದರು.

ಬಳಿಕ ಇವರು ಹೊಸ ಪ್ರಯೋಗ ಮಾಡಿ ಪ್ಲಾಸ್ಟಿಕ್ ಟಬ್‌ಗಳಲ್ಲಿ ತಾವರೆ & ಕಮಲ ಗಿಡ ಗಿಡಗಳನ್ನು ಯಾಕೆ ಬೆಳೆಸಬಾರದು? ಅಂತಾ ಈ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹಳೆಯ ಫಿಡ್ಜ್ ಬಾಕ್ಸ್, ಸಣ್ಣ ಸಣ್ಣ ಡಬ್ಬಗಳು, ಸಿಮೆಂಟ್ ಪಾಂಡ್‌ಗಳಲ್ಲಿ ಬಳಸಿ 30ಕ್ಕೂ ಹೆಚ್ಚು ವಿವಿಧ ಬಗೆಯ ತಾವರೆ & ಕಮಲ ಗಿಡಗಳನ್ನು ಬೆಳೆಸಿದ್ದಾರೆ.

ಈ ಪ್ರಯೋಗವು ಇವತ್ತು ದೊಡ್ಡದಾಗಿ ಮುಂದುವರಿದೆ.

ಮಂಜುಪ್ರಸಾದ್‌ರವರು ತಾವರೆ & ಕಮಲ ಗಿಡಗಳನ್ನು ಸ್ನೇಹಿತರಿಂದ, ಮಾರಾಟಗಾರದಿಂದ ಖರೀದಿ ಮಾಡಿ, ಬೆಳೆಸಿದ್ದಾರೆ.ಇವರ ಬಳಿ 200ರೂ.ನಿಂದ ಪ್ರಾರಂಭವಾಗಿ 2000 ರೂ. ಬೆಲೆ ಬಾಳುವ ಗಿಡಗಳಿವೆ.

ತಾವರೆ & ಕಮಲ ಗಿಡಗಳಿಗೆ ಸರಿಯಾಗಿ ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳುವುದು. ನೀರಿನ ಗುಣಮಟ್ಟ ಕಾಪಾಡುವುದು. 6 ತಿಂಗಳಿಗೊಮ್ಮೆ ಗಿಡಗಳನ್ನು ಮರು ನೆಡುವಿಕೆ, ಸಾವಯವ ಗೊಬ್ಬರದ ಬಳಕೆ, ಕಳೆಗಳನ್ನು ತೆಗೆಯುವುದು, ಕೀಟಗಳು ಬಾರದಂತೆ ಕ್ಲೀನ್ ಮಾಡುವುದು, ನೆಟ್ ಬಳಸಿ ಆರೈಕೆ ಮಾಡುತ್ತಾರೆ.

ಗಿಡಗಳನ್ನು ಇವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಓಲೆಕ್ಸ್ , ವಾಟ್ಸಪ್ ಮೂಲಕ ಮಾರಾಟ ಮಾಡುತ್ತಾರೆ. ಹಾಗೂ ಸ್ನೇಹಿತರ ಮೂಲಕವೂ ಖರೀದಿಯಾಗುತ್ತದೆ.

ಕಮಲ ಅಂದ ಕೂಡಲೇ ಕೇವಲ ಕಮಲ ಮಾತ್ರ ಅಂತಾ ಅಂದುಕೊಳ್ಳುತ್ತೇವೆ, ಆದರೆ ಇವರಲ್ಲಿ ಕಮಲದಲ್ಲಿ ಹಲವು ವಿಧಗಳಿವೆ ಡ್ರಾಪ್ ಬ್ಲಡ್ ಲೋಟಸ್, ಕರ್ಣ, ಅಮೇರಿ ಕ್ಯಾಮೆಲಿಯಾ, ಪಿಂಕ್ ಕ್ಲೌಡ್, ಬುದ್ಧ ಸೌಂಡ್ ಇನ್ನಿತ್ತರ ಗಿಡಗಳು ಹಾಗೂ ತಾವರೆಯಲ್ಲಿ ಹಲವು ವಿಧಗಳಿದ್ದು ವಾಟರ್ ಲಿಲ್ಲಿ, ಬುಲ್ಸ್ ಐ, ಪಪಿಂಕ್ ನೈಟ್ ಬ್ಲೂಮರ್, ಪರ್ಪಲ್ ಜಾಯ್, ಟ್ರಾಪಿಕಲ್ ಸನ್‌ಲೈಟ್, ಕ್ವೀನ್ ಆಫ್ ಹಾರ್ಟ್ಸ್ ಸೇರಿದಂತೆ ಸುಮಾರು 30 ವೈರೈಟಿಯ ಗಿಡಗಳು ಇದೆ. ಸೊಳ್ಳೆಗಳಿಂದ ರಕ್ಷಣೆಗೆ ಗಪ್ಪಿ ಮೀನು, ಪ್ಲಾಟಿ, ಮೋಲಿ ತಳಿಯ ಮೀನುಗಳನ್ನು ಬಿಡಲಾಗಿದೆ.

ಇವರಿಗೆ ಸ್ಥಳಾವಕಾಶದ ಕೊರತೆ ಇದ್ದು, ಇದನ್ನು ಹವ್ಯಾಸವಾಗಿ ಮಾಡುವುದರಿಂದ ವಾರ್ಷಿಕ ಅಂದಾಜು ಆದಾಯ 50 ರಿಂದ 1 ಲಕ್ಷ ಇರಬಹುದು. ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದರೆ ಹೆಚ್ಚು ಹಣಗಳಿಸಬಹುದು ಎನ್ನುತ್ತಾರೆ ಮಂಜುಪ್ರಸಾದ್‌ರವರು.

ಬೆಳಗ್ಗೆ 6 ಗಂಟೆಯಿಂದ ಗಿಡಗಳ ಜೊತೆ ಇದ್ದು , ತೊಂದರೆಯಾದ ಗಿಡಗಳನ್ನು ಶಿಫ್ಟ್ ಮಾಡಲಾಗುತ್ತದೆ. ಬಳಿಕ ಪಕ್ಷಿ, ಅಲಂಕಾರಿಕ ಮೀನುಗಳ ಆರೈಕೆ ಮಾಡಿ, ಆಫೀಸ್‌ಗೆ ತೆರಳುತ್ತಾರೆ.

ವಾರಾಂತ್ಯದಲ್ಲಿ ಗ್ರಾಹಕರಿಗೆ ತಾವರೆ & ಕಮಲ ಗಿಡಗಳನ್ನು ಸಣ್ಣ ಚಟ್ಟಿಯೊಂದಿಗೆ ರಚನೆ ಮಾಡಿಕೊಡುವುದು.
ಗಿಡಗಳನ್ನು ನೆಡುವ ಕೆಲಸಗಳನ್ನು ಮಾಡುತ್ತಾರೆ.

ಮನೆಯಲ್ಲಿ ತಂದೆ ರಾಮಮೋಹನ ಗೌಡ ಹಾಗೂ ತಾಯಿ ಗೀತಾ ರಾಮಮೋಹನ ಹಾಗೂ ಪತ್ನಿ ದೇಶಿತಾ ಕರಂದ್ಲಾಜೆ , ಮಗಳು ವೃಶಾಲಿ ಬೆಳ್ಳ್ಯಪ್ಪ ಇದ್ದು ಇವರು ಕೆಲಸಕ್ಕೆ ಅಥವಾ ಇನ್ನಿತ್ತರೇ ಕಾರ್ಯಕ್ರಮಗಳಿಗೆ ಹೋದಾಗ ಗಿಡಗಳನ್ನು ಆರೈಕೆ ಮಾಡುತ್ತಾರೆ.

ಮನೆಯಲ್ಲಿ ಕೆಲಸವಿಲ್ಲದೆ, ಖಾಲಿ ಕುಳಿತು ಏನಾದರೂ ಸಣ್ಣ ಕೆಲಸ ಮಾಡಿ ಸ್ವಂತ ಕಾಲಿನಿಂದ ನಿಲ್ಲಬೇಕು ಎನ್ನುವ ಯೋಚನೆ ಇರುವವರಿಗೆ ಇದು ಉತ್ತಮ ದಾರಿ.
ತಾವರೆ & ಕಮಲ ಗಿಡವನ್ನು ಬೆಳೆಸಿ, ಗಿಡ ಮಾರಿ ಉತ್ತಮ ಆದಾಯ ಗಳಿಸಬಹುದು.

ಒಟ್ಟಿನಲ್ಲಿ ಸ್ವಲ್ಪ ಜಾಗ ಇದ್ರು ಮನಸ್ಸು ಮತ್ತು ಆಸಕ್ತಿ ಇದ್ರೆ , ಈ ತರಹದ ತಾವರೆ & ಕಮಲ ಗಾರ್ಡನ್ ಮಾಡಿ ಆದಾಯ ಗಳಿಸಬಹುದು ಎಂಬುದನ್ನು ಇವರು ತೋರಿಸಿ ಕೊಟ್ಟಿದ್ದಾರೆ. ಮಂಜುಪ್ರಸಾದ್‌ರವರ ಈ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು.

ಬರಹ: ಪೂಜಾಶ್ರೀ ವಿತೇಶ್ ಕೋಡಿ