ಪಡ್ಪಿನಂಗಡಿ: ಸ್ಪೋಕನ್ ಇಂಗ್ಲೀಷ್ ಉದ್ಘಾಟನೆ ಮತ್ತು ಇಂಗ್ಲಿಷ್ ಶಿಕ್ಷಕಿಯ ಸ್ವಾಗತ

0

ಪಡ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ಉದ್ಘಾಟನೆ ಮತ್ತು ಇಂಗ್ಲಿಷ್ ಶಿಕ್ಷಕಿಯ ಸ್ವಾಗತ ಕಾರ್ಯಕ್ರಮ .ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್ ರವರ ಮುಂದಾಳತ್ವದಲ್ಲಿ ಜೂ.19 ರಂದು ನಡೆಯಿತು.
ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ ಸಭಾಧ್ಯಕ್ಷತೆ ವಹಿಸಿದ್ದರು.


ಸ್ಥಳದಾನಿ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ ಉದ್ಘಾಟಿಸಿದರು. ದಾನಿಗಳಾದ ಸುರೇಶ್ ಕುಮಾರ್ ನಡ್ಕ, ಎಸ್ ಡಿ ಎಂ ಸಿ ಸದಸ್ಯ ಆದಂ, ದಾನಿಗಳು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಧರ್ಮವತಿ ಟಿ ಪ್ರಾಸ್ತಾವಿಕ ಗೈದರು.ಶಿಕ್ಷಕಿ ಶ್ರೀಮತಿ ಸುಗಂಧಿ ಪುತ್ಯ ಸ್ವಾಗತಿಸಿದರು. ಶಿಕ್ಷಕಿ ಲಾವಣ್ಯ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಯೋಗೀಶ್ವರಿ ವಂದಿಸಿದರು.