ಅಜ್ಜಾವರ ಮೇನಾಲ ಮಖಾಂ ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಮಾರಂಭ

0

ಮನುಷ್ಯ ಗುಣ ಪ್ರಾಣಿಗುಣಕ್ಕಿಂತ ಹೀನಾವಾಗಿದೆ:ಅಬೀದಿನ್ ತಂಙಳ್

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಜ್ಜಾವರ ಮೇನಾಲ ಮಖಾಂ ವಠಾರದಲ್ಲಿ‌ ನಡೆಯಿತು.
ಉರೂಸ್ ಸಮಾರೋಪ ಸಮಾರಂಭದ ಸಯ್ಯದ್ ಝೈನುಲ್ ಅಬಿದೀನ್ ಉರೂಸ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ “ಇತ್ತಿಚಿನ ಕಾಲದಲ್ಲಿ ಯವಜನಾಂಗವು ಅನೈತಿಕ ಚಟುವಟಿಕೆಗಳಲ್ಲಿ ಬಾಗಿಯಾಗುವುದು,ಮಾದಕವಸ್ತುಗಳ ದಾಸರಾಗುವವರ ಸಂಖ್ಯೆ ಹೆಚ್ಚುತ್ತಿದೆ ಇದರ ಪರಿಣಾಮದಿಂದ ಯಮನುಷ್ಯಕುಲ ಪ್ರಾಣಿಗಳಿಗಿಂತ ಕ್ರೂರಿಗಳಾಗಿ ಪರಿವರ್ತನೆ ಹೊಂದುತ್ತಿದ್ದಾರೆ. ಕೇಲವು ಕಡೆಗಳಲ್ಲಿ ತಂದೆಯನ್ನು ಮಕ್ಕಳು ಕೊಲ್ಲುವುದು ಪತಿ-ಪತ್ನಿಯನ್ನು ಪತ್ನಿ_ಪತಿಯನ್ನು ಬೇರೆಬೇರೆ ರೀತಿಯಲ್ಲಿ ಕೊಲೆಮಾಡುವುದು ರಕ್ತ ಸಂಬಂದಿಗಳು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ಕೊಲೆಯಲ್ಲಿ ಅಂತ್ಯ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ.


ಇದು ಬಹಳ ದುರದೃಷ್ಟಕರ ಮನುಷ್ಯ ಎಷ್ಟು ವಿದ್ಯಾವಂತರಾಗಿಯು ಪ್ರಯೋಜನವಿಲ್ಲ ವಿದ್ಯೆಯೊಂದಿಗೆ ಸಂಸ್ಕಾರ,ಸರಳ ಮತ್ತು ಸೂಕ್ಷ್ಮತೆಯ ಜೀವನ ನಡೆಸಿದರೆ ಮಾತ್ರ ಒಳಿತಿನಡೆಗೆ ಸಾಗಬಹುದು ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದವರು ಹೇಳಿದರು”

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಯತ್ ಕಮಿಟಿ ಅಧ್ಯಕ್ಷ ಅಬ್ದುಲ್‌ ಖಾದರ್ ಹಾಜಿ ಎ ವಹಿಸಿದ್ದರು.


ಸಯ್ಯದ್ ಹುಸೈನ್ ತಂಙಳ್ ಅದೂರ್,ಅನ್ವರಲಿ ದಾರಿಮಿ ಮುಕ್ವೆ,ಅಹಮದ್ ಮದನಿ ಅಜ್ಜಾವರ, ಮುಹ್ಯದ್ದೀನ್ ಅನ್ಸಾರಿ,ಅಬೂಭಕ್ಕರ್ ಅಝ್ಹರಿ,ಸಮೀರ್ ಹುದವಿ,ಅಬ್ಬಾಸ್ ಅನ್ಸಾರಿ,ರಫೀಕ್ ಮುಸ್ಲಿಯಾರ್ ಅಜ್ಜಾವರ, ಶಾಫಿ ದಾರಿಮಿ ಅಜ್ಜಾವರ,ಜಮಾಯತ್ ಸಮಿತಿ ಉಪಾಧ್ಯಕ್ಷ ಅಂದ ಹಾಜಿ ಪ್ರಗತಿ,ಸಮಿತಿ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ,ಕೋಶಾಧಿಕಾರಿ ಶರೀಫ್ ರಿಲಾಕ್ಸ್,ಸಮಿತಿ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕುಂಞಿ ಪಳ್ಳಿಕರೆ, ಮೇನಾಲ ಮಸೀದಿ ಇಮಾಂ ಮಹಮ್ಮದ್ ಹನೀಫ್ ಮೌಲವಿ, ನೌಶಾದ್ ಯಮಾನಿ,ಮೊದಲಾದವರು ಉಪಸ್ಥಿತರಿದ್ದರು.

ಹನೀಫ್ ನಿಝಾಮಿ,ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಬಾಷಣ ಮಾಡಿದರು.
ಅಜ್ಜಾವರ ಮಸೀದಿ ಖತೀಬರಾದ ಅನ್ನರ್ ಮುನವ್ವರಿ ಸ್ವಾಗತಿಸಿ ರಜಾಕ್ ಮುಸ್ಲಿಯಾರ್, ಮಹಮ್ಮದ್ ರಫೀಕ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ಕೊನೆಯ ಅನ್ನದಾನ ವಿತರಣೆ ನಡೆಯಿತು.