ಸುಬ್ರಹ್ಮಣ್ಯ ಠಾಣಾ ಎ.ಎಸ್. ಐ ಆಗಿ ಧನೇಶ್ ಕರ್ತವ್ಯಕ್ಕೆ ಹಾಜರು

0

ಸುಬ್ರಹ್ಮಣ್ಯ ಠಾಣೆಯ ನೂತನ ಎ. ಎಸ್ .ಐ ಆಗಿ ಸುಳ್ಯದಿಂದ ವರ್ಗಾವಣೆಗೊಂಡಿದ್ದ ಧನೇಷ್ ಅವರು ಜೂ. 21 ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಹಿಂದೆ ಸುಳ್ಯ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಇವರು ಎ.ಎಸ್.ಐ ಆಗಿ ಮುಂಭಡ್ತಿಗೊಂಡಿದ್ದರು. ಇದೀಗ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದರು. ಇವರು ಮೂಲತಃ ಮರ್ಕಂಜ ಗ್ರಾಮದ ಕಾಯರದವರು.