ಮುರುಳ್ಯ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

0


ಮುರುಳ್ಯ ಸ. ಉಹಿ.ಪ್ರಾ.ಶಾಲೆಯಲ್ಲಿ ೯ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂ. ೨೧ ರಂದು ಆಚರಿಸಲಾಯಿತು. ಎಸ್. ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಮಧು ಪಿ.ಆರ್. ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಗುರುಗಳಾದ ಶ್ರೀಮತಿ ಶಶಿಕಲಾರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತಂಜಲಿ ಯೋಗ ಸಮಿತಿ ಸುಳ್ಯ ಇದರ ಯೋಗಗುರುಗಳಾದ ಧನಂಜಯ ಬೆಳ್ಳಾರೆ ಮುಖ್ಯ ಅತಿಥಿಗಳಾಗಿ ಈ ದಿನದ ಮಹತ್ವದ ಕುರಿತು ಅನೇಕ ಮಾಹಿತಿಗಳನ್ನು ನೀಡಿದರು.


ಎಸ್. ಡಿ .ಎಂ .ಸಿ ಉಪಾಧ್ಯಕ್ಷರಾದ ಶ್ರೀ ಅವಿನಾಶ್ ದೇವರಮಜಲು ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಯೋಗ ಗುರುಗಳಾದ ಶ್ರೀಮತಿ ಕಮಲ ನಡ್ಕ ಮತ್ತು ಶ್ರೀಮತಿ ಕವಿತಾ ಪ್ರಸಾದ್ ಮಕ್ಕಳಿಗೆ ತರಬೇತಿ ನೀಡಿ ಯೋಗ ದಿನಾಚರಣೆ ಯಶಸ್ವಿಯಾಗಲು ಸಹಕರಿಸಿದರು. ನಂತರ ೪೫ ನಿಮಿಷಗಳ ಯೋಗಾಸನವನ್ನು ಕ್ರಮಬದ್ಧವಾಗಿ ಎಲ್ಲರೂ ಮಾಡಿದರು. ಕಾರ್ಯಕ್ರಮದ ಕೊನೆಗೆ ಯೋಗ ಪ್ರತಿಜ್ಞೆ ಮತ್ತು ಶಾಂತಿ ಮಂತ್ರ ಹೇಳಲಾಯಿತು. ಸುಮಾರು ೮೫ ಮಕ್ಕಳು ,೮ ಶಿಕ್ಷಕರು,೧೫ ಪೋಷಕರು ಭಾಗವಹಿಸಿದ್ದರು. ಶಿಕ್ಷಕರು ಸಹಕರಿಸಿದರು.