ಗುತ್ತಿಗಾರು : ಬ್ಲೆಸ್ಸ್ಡ್ ಕುರಿಯಾಕೋಸ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆ

0


ಮತ್ತು ನೂತನ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ

2023-2024ನೇ ಸಾಲಿನ ಮಂತ್ರಿಮಂಡಲ ರಚನೆಯು ಜೂ.17ರಂದು ‘ಇಲೆಕ್ಟ್ರಾನಿಕ್ ವೋಟಿಂಗ್’ ಮೆಷಿನ್ ಮೂಲಕ ನಡೆಯಿತು. ಜೂ.23ರಂದು ನೂತನ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ಕೆ. ಎಸ್. ಎಸ್.ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾoಶುಪಾಲರಾದ ರಂಗಯ್ಯ ಶೆಟ್ಟಿಗಾರ್ ದೀಪ ಬೆಳಗಿಸಿ, ಉದ್ಘಾಟಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು .

ಶಾಲಾ ಸಂಚಾಲಕಿ ಸಿಸ್ಟರ್ ಪಾವನ, ಶಾಲಾ ಮುಖ್ಯೋಪಾಧ್ಯಾ ಯಿನಿಯಾದ ಸಿಸ್ಟರ್ ಟ್ರೀಸಾ ಜಾನ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಮಂತ್ರಿಯಾಗಿ ಅಖಿಲ್ ಅಂಬೆಕಲ್ಲು, ಉಪಮುಖ್ಯಮಂತ್ರಿಯಾಗಿ ಜಾಕ್ಸನ್ ಡಿಸೋಜ, ಸಾಂಸ್ಕೃತಿ ಮಂತ್ರಿಯಾಗಿ ಆಶೀಶ್ ಯಂ, ಉಪಸಾಂಸ್ಕೃತಿ ಮಂತ್ರಿಯಾಗಿ ಧೃತಿ ಕೆ.ವಿ, ಕ್ರೀಡಾ ಮಂತ್ರಿಯಾಗಿ ಅಖಿಲ್ ಜೋಬಿ, ಸಹಾಯಕ ಕ್ರೀಡಾ ಮಂತ್ರಿಯಾಗಿ ಆತ್ಮಿಕ ರೈ. ಅರೋಗ್ಯ ಮಂತ್ರಿಯಾಗಿ ದಿತೇಶ್. ಬಿ, ಸಹಾಯಕ ಆರೋಗ್ಯ ಮಂತ್ರಿಯಾಗಿ ತನುಶ್ರೀ, ಶಿಸ್ತು ಪಾಲನ ಮಂತ್ರಿಯಾಗಿ ಸಾನ್ವಿಕ ಡಿ, ಉಪಶಿಸ್ತು ಪಾಲನ ಮಂತ್ರಿಯಾಗಿ ಭ್ರತಿ, ಸಮೂಹ ಮಾಧ್ಯಮ ಮಂತ್ರಿಯಾಗಿ ಜಸ್ವಿನ್ ಎಲ್, ಉಪ ಸಮೂಹ ಮಾಧ್ಯಮ ಮಂತ್ರಿ ಯಾಗಿ ಶೆರಿನ್ ವರ್ಗಿಸ್ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಹರ್ಷಿತಾ ಸ್ವಾಗತಿಸಿ, ಕುಮಾರಿ ಅದಿತಿ ವಂದಿಸಿದರು. ಕುಮಾರಿ ಹಿತಾ ಮತ್ತು ರಚನಾ ಕಾರ್ಯಕ್ರಮ ನಿರೂಪಿಸಿದರು.