ಐವರ್ನಾಡು ಗ್ರಾಮದ ಮಡ್ತಿಲ ಬಜಂತಡ್ಕ ಅಲೆಕ್ಕಲ ಮೀನಾಜೆ ನನ್ಯಡ್ಕ ಸಂಪರ್ಕದ ರಸ್ತೆಯ ಕಾಮಗಾರಿ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದ್ದು ಸಂಪೂರ್ಣ ಕೆಸರುಮಯಗೊಂಡಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಇದೀಗ ಸುರಿಯುತ್ತಿರುವ ಮಳೆಯಿಂದ ರಸ್ತೆ ಕೆಸರು ಮಯಗೊಂಡು ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿನಿರ್ಮಾಣವಾಗಿದೆ.
ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿರುವ ಘಟನೆಯು ಸಂಭವಿಸಿದೆ. ಸಂಬಂಧ ಪಟ್ಟ ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ರಸ್ತೆಯನ್ನು ಪರಿಶೀಲಿಸಿ ದುರಸ್ತಿ ಕಾರ್ಯ ನಿರ್ವಹಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿರುತ್ತಾರೆ.