ಕಲ್ಲಪಳ್ಳಿ ಪಾಣತ್ತೂರು ಸಂಪರ್ಕದ ಬಾಟೋಳಿ ಎಂಬಲ್ಲಿ ಬರೆ ಕುಸಿದು ರಸ್ತೆ ಸಂಚಾರ ಬಂದ್

0

ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ಸಂಪರ್ಕದ ರಸ್ತೆಯ ಬಾಟೋಳಿ ಎಂಬಲ್ಲಿ ಬರೆ ಕುಸಿದು ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಬಾಟೋಳಿ ಗಡಿ ಪ್ರದೇಶದಿಂದ ಸುಮಾರು 100 ಮೀಟರ್ ಮುಂದೆ ಘಟನೆ ಸಂಭವಿಸಿದ ದರಿಂದ ಪಾಣತ್ತೂರು ರಸ್ತೆ ಸಂಚಾರ ಬಂದ್ ಆಗಿರುತ್ತದೆ. ರಾತ್ರಿ ಸುರಿದ ಮಳೆಯಿಂದಾಗಿ ಬರೆ ಕುಸಿಯತೊಡಗಿದೆ. ಈ ಭಾಗದಲ್ಲಿ ಹಿಂದೆಯೂ ಬರೆ ಕುಸಿತಗೊಂಡಿತ್ತು.

ಲಘು ವಾಹನಗಳು ಬಡ್ಡಡ್ಕ ದಿಂದ ರಂಗತ್ತಮಲೆ ಪರ್ಯಾಯ ಮಾರ್ಗವಾಗಿ ಸಂಚರಿಸಬಹುದು.