ಕೇನ್ಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಲ್ಯಡ್ಕ ದಲ್ಲಿ ಶ್ರೀ ದುರ್ಗಾ ಸೇವಾ ಸಂಘ ಕೇನ್ಯ ಇದರ ಆಶ್ರಯದಲ್ಲಿ “ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಮುಂಬೈ ಇವರು ಸತತವಾಗಿ 2ನೇ ಬಾರಿಗೆ ಉಚಿತವಾಗಿ ನೀಡಿರುವ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಜು. 15ರಂದು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಂಭ್ರಮ ಶನಿವಾರ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಾಹಿತಿಯನ್ನು ಶಾರೀರಿಕ ವ್ಯಾಯಾಮ ಮೂಲಕ ಮಾಡುವುದರ ತಿಳಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಶೇಖರ್ ಕಣ್ಕಲ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದುರ್ಗಾ ಸೇವಾ ಸಂಘದ ಕಾರ್ಯದರ್ಶಿ ದೇವಿಪ್ರಸಾದ್ ರೈ ಗೆಜ್ಜೆ ಉಪಸ್ಥಿತರಿದ್ದು ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಪುರುಷೋತ್ತಮ್, ಸಹ ಶಿಕ್ಷಕಿ ಶ್ರೀಮತಿ ಅಶ್ವಿತ , ಪ್ರಕಾಶ್ ಆಚಾರ್ಯ ನರಿಯಂಗ ಉಪಸ್ಥಿತರಿದ್ದರು.
ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್ ಮುಂಬೈ ಇದರ ವತಿಯಿಂದ ಈ ವರ್ಷ ಕೇನ್ಯ, ಕಣ್ಕಲ್, ನೆಲ್ಯಡ್ಕ, ಸಂಪ್ಯಾಡಿ, ಎಣ್ಣೆಮಜಲು ಗ್ರಾಮೀಣ ಸರಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತವಾಗಿ ನೋಟ್ ಪುಸ್ತಕ ನೀಡಿರುತ್ತಾರೆ.