ಪಂಜ: ವನಿತಾ ಸಮಾಜದಲ್ಲಿ-ಆಟಿ ಸಂಭ್ರಮ

0

ಪಂಜ ವನಿತಾ ಸಮಾಜದಲ್ಲಿ ಆಟಿ
ಸಂಭ್ರಮ -2023 ಕಾರ್ಯಕ್ರಮ
ನಡೆಯಿತು.
ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಗೌರವಾದ್ಯಕ್ಷೆ ಶ್ರಿಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್ ಆಟಿ ತಿಂಗಳ ವಿಶೇಷತೆಯ ಬಗ್ಗೆ ಮಾತನಾಡಿದರು.
ಕಾರ್ಯದರ್ಶಿ ಶ್ರೀಮತಿ ಪವಿತ್ರ ಕುದ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು 40 ಬಗೆಯ ಆಟಿ ತಿಂಗಳ ತಿನಿಸುಗಳನ್ನು ತಯಾರಿಸಿ ತಂದು ಸಹಭೋಜನ ಮಾಡಿದರು.ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಶೀಮತಿ ಪೂರ್ಣಿಮಾ ಜಾಕೆ ಪ್ರಾರ್ಥಿಸಿದರು.. ಶ್ರೀಮತಿ ತುಳಸಿ ದಯಪ್ರಸಾದ್ ಚೀಮುಳ್ಳು ಸ್ಪರ್ಧೆಗಳನ್ನು ನಿರ್ವಹಿಸಿದರು.
ವನಿತ ಸಮಾಜದ ಕಾರ್ಯದರ್ಶಿ ಶ್ರೀಮತಿ ಪವಿತ್ರ ಕುದ್ವ ವಂದಿಸಿದರು