














ಐವತೋಕ್ಲು ಒಕ್ಕೂಟದ ಚಳ್ಳಕೋಡಿ ವೇದಾವತಿಯವರ ಮನೆಯಲ್ಲಿ ಪಾಂಡಿಗದ್ದೆ ಪರಿಸರದ 10ಮಹಿಳಾ ಮಣಿ ಗಳನ್ನು ಒಟ್ಟು ಸೇರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ “ಶ್ರೀ ಉಳ್ಳಾಲ್ತಿ” ಸ್ವಸಹಾಯ ಸಂಘ ಉದ್ಘಾಟನೆ ಗೊಂಡಿತು.

ಒಕ್ಕೂಟದ ನಿಕಟ ಪೂರ್ವ ಉಪಾಧ್ಯಕ್ಷ ಶ್ರೀಮತಿ ಲಕ್ಷ್ಮಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಉಪಾಧ್ಯಕ್ಷೆ ಶ್ರೀಮತಿ ರೇವತಿ ಯವರು ಹೊಸ ಸದಸ್ಯರಿಗೆ ದಾಖಲಾತಿ ಹಸ್ತಾಂತರ ಮಾಡಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಕಲಾವತಿ ಯವರು ಯೋಜನೆಯ ಹಿನ್ನಲೆ ಯನ್ನು ವಿವರಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಸುನೀತಾ ಕೃಷ್ಣನಗರ ಸ್ವಾಗತಿಸಿದರು. ಐವತೋಕ್ಲು ಒಕ್ಕೂಟದ ಸೇವಾಪ್ರತಿನಿಧಿ ಶ್ರೀಮತಿ ರೋಹಿಣಿ ಆರ್ನೋಜಿ ನಿರೂಪಿಸಿ ಮತ್ತು ವಂದಿಸಿದರು.









