ಸುಬ್ರಹ್ಮಣ್ಯ : ರೋಟರಿ ಕ್ಲಬ್ ಪದಗ್ರಹಣ

0


ಸುಬ್ರಹ್ಮಣ್ಯ ರೋಟರಿ ಕ್ಲಬ್ 2023 24ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 22 ರಂದು ಸುಬ್ರಹ್ಮಣ್ಯದ ಇಂಜಾಡಿಯ ಮಹಮ್ಮಾಯಿ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆಯಿತು . ಸಮಾರಂಭದ ಆರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ ಎಣ್ಣೆ ಮಜಲ್ ವಹಿಸಿದ್ದರು.

ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3181 ಇದರ ನಿಯೋಜಿತ ಡಿಸ್ಟ್ರಿಕ್ಟ್ ಗವರ್ನರ್ ಮೈಸೂರಿನ ರಾಮಕೃಷ್ಣ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಗವರ್ನರ್ ರವರ ವಿಶೇಷ ಪ್ರತಿನಿಧಿ ಸವಣೂರು ಸೀತಾರಾಮ ರೈ ,ಅಸಿಸ್ಟೆಂಟ್ ಗವರ್ನರ್ ಪುರಂದರ ರೈ , ಝೋನಲ್ ಲೆಫ್ಟಿನೆಂಟ್ ಪದ್ಮನಾಭ ಬೀಡು, ನಿಕಟ ಪೂರ್ವ ಅಧ್ಯಕ್ಷ ವಿಜಯಕುಮಾರ್ ಅಮೈ, ಕಾರ್ಯದರ್ಶಿ ಡಾl ರವಿ ಕಕ್ಕೆಪದವು ವೇದಿಕೆಯಲ್ಲಿದ್ದರು . ನೂತನ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು ಅವರಿಗೆ ಪದಗ್ರಹಣ ಅಧಿಕಾರಿ ರಾಮಕೃಷ್ಣ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿ ಮೋಹನ ದಾಸ್ ಎಣ್ಣೆ ಮಜಲ್, ಕೋಶಾಧಿಕಾರಿ ವಿಶ್ವನಾಥ ನಡುತೋಟ ಹಾಗೂ ಪದಾಧಿಕಾರಿಗಳಿಗೆ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಪ್ರಮಾಣ ವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಪುಂಗವ ಗೌಡರನ್ನು ಸನ್ಮಾನಿಸಲಾಯಿತು .ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕ ಪಡೆದ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಜಯಪ್ರಕಾಶ್ ನಿರ್ವಹಿಸಿದರು. ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಶಿವರಾಮ ಎನೇಕಲ್ ಹಾಗೂ ನಿಕಟ ಪೂರ್ವ ಅಧ್ಯಕ್ಷ ಗೋಪಾಲ್ ಎಣ್ಣೆಮಜಲ್ ಕಾರ್ಯದರ್ಶಿ ಡಾ lರವಿ ಕಕ್ಕೆ ಪದವು ಅವರುಗಳನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು .

ಸಮಾರಂಭದಲ್ಲಿ. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ನೂತನ ಸದಸ್ಯರಾಗಿ ಮಾಧವ ಗೌಡ ಕತ್ಲಡ್ಕ ಹಾಗೂ ಭವಾನಿ ಶಂಕರ ಪೈಲಾಜೆ ಅವರುಗಳನ್ನ ಸೇರ್ಪಡಿಸಲಾಯಿತು . ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ರಾಮಕೃಷ್ಣ ಮಲ್ಲಾರ ಸ್ವಾಗತಿಸಿದರು.

ಭರತ್ ನೇಕ್ರಾಜೆ ಕಾರ್ಯಕ್ರಮ ನಿರ್ವಹಿಸಿದರು . ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ಮೋಹನ್ದಾಸ್ ಎಣ್ಣೆ ಮಜಲ್, ಧನ್ಯವಾದ ಸಮರ್ಪಿಸಿದರು.