ಬೆಳ್ಳಾರೆ : ಅಸೌಖ್ಯದಿಂದ ಯುವಕ ಮೃತ್ಯು

0

ಟೂರಿಸ್ಟ್ ಬಸ್ಸಿನಲ್ಲಿ ಡ್ರೈವರ್ ಆಗಿದ್ದ ಬೆಳ್ಳಾರೆಯ ಯುವಕನೋರ್ವ ಅಸೌಖ್ಯದಿಂದ ಮೃತಪಟ್ಟ ಘಟನೆ ಮಾ.28 ರಂದು ನಡೆದಿದೆ.
ಬೆಳ್ಳಾರೆಯ ಕೊಳಂಬಳ ರುಕ್ಮಯ್ಯ ಶೆಟ್ಟಿಗಾರ್ ಎಂಬವರ ಪುತ್ರ ಲೋಕೇಶ್ ಮೃತಪಟ್ಟ ದುರ್ದೈವಿ.
ಇವರಿಗೆ 35 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರ ರಿತ್ವಿಕ್,ಪುತ್ರಿ ಶರಾಯ ಹಾಗೂ ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.
ಮಂಗಳೂರಿನ ಖಾಸಗಿ ಟೂರಿಸ್ಟ್ ಬಸ್ಸಿನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಇವರು ಮಾ.27 ರಂದು ಲೊ ಬಿಪಿಗೊಳಗಾಗಿ ಅಸ್ವಸ್ಥರಾಗಿದ್ದು ಅವರನ್ನು ಕೂಡಲೇ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.
ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮಾ.28 ರಂದು ನಿಧನರಾದರೆಂದು ತಿಳಿದು ಬಂದಿದೆ.