ಸುಳ್ಯ ಲೋಕೋಪಯೋಗಿ ಇಲಾಖೆ ಎ.ಇ.ಇ. ಆಗಿ ಗೋಪಾಲ್ ಅಧಿಕಾರ ಸ್ವೀಕಾರ

0

ಇಬ್ಬರು ಎ.ಇ. ಗಳಾದ ಉದಯಕುಮಾರ್, ಪ್ರೀತಿ ಪಿ ಆಗಮನ

ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಗೋಪಾಲ ಎಂಬವರು ಆಗಮಿಸಿದ್ದು ಅಧಿಕಾರ ಸ್ವೀಕರಿಸಿದ್ದಾರೆ.

ಸುಳ್ಯ ಎ.ಇ.ಇ. ಆಗಿದ್ದ ಲೋಕೇಶ್ ರವರು ಜು.31 ರಂದು ಸೇವಾ ನಿವೃತ್ತರಾಗಿದ್ದು, ಅವರ ಜಾಗಕ್ಕೆ ಗೋಪಾಲರು ಬಂದಿದ್ದಾರೆ.
ಮಂಗಳೂರು ಲೋಕೋಪಯೋಗಿ ಇಲಾಖೆಯಲ್ಲಿ ಎ.ಇ. ಆಗಿದ್ದ ಗೋಪಾಲ ರು ಪದೋನ್ನತಿಗೊಂಡು ಸುಳ್ಯಕ್ಕೆ ಬಂದಿದ್ದಾರೆ.

ಇಬ್ಬರು ಎ.ಇ. ಗಳು : ಸುಳ್ಯ ಲೋಕೋಪಯೋಗಿ ಇಲಾಖೆಗೆ ಹೊಸದಾಗಿ ಇಬ್ಬರು ಸಹಾಯಕ ಇಂಜಿನಿಯರ್ ಗಳಾಗಿ ಚಿಕ್ಕಮಗಳೂರಿನ ಉದಯಕುಮಾರ್ ಹಾಗೂ ಮೈಸೂರು ರಾಮಕೃಷ್ಣನಗರದ ಪ್ರೀತಿ ಪಿ ಎಂಬವರು ಬಂದಿದ್ದಾರೆ.