ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪೂರ್ವ ವಿದ್ಯಾರ್ಥಿಗಳ ಸ್ನೇಹಕೂಟ

0

ಸೈಂಟ್ ಜೋಸೆಫ್ ಶಾಲಾ ಹಿರಿಯ ವಿದ್ಯಾರ್ಥಿಗಳ ಸ್ನೇಹಕೂಟ ಕಾರ್ಯಕ್ರಮ ಆಗಸ್ಟ್ 6 ರಂದು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹಕೂಟ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ರೆ.ಫಾ. ವಿಕ್ಟರ್ ಡಿಸೋಜಾ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢಶಾಲಾ ಪೋಷಕ ಸಮಿತಿಯ ಅಧ್ಯಕ್ಷರಾದ ಗುರು ಬೀರಮಂಗಲ, ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಅಧ್ಯಕ್ಷರಾದ ಜೆ .ಕೆ .ರೈ, ಸೈಂಟ್ ಬ್ರಿಜಿಡ್ಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ನವೀನ್ ಮಚ್ಚಾದೋ , ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ಸಹಶಿಕ್ಷಕಿ ದೇವಿಲತಾ ಹಿರಿಯ ವಿದ್ಯಾರ್ಥಿ ಸಂಘದ ರಚನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. 2023 -24ರ ಸಾಲಿನ ಸುಳ್ಯ ತಾಲೂಕು ಮಟ್ಟ ಕ್ರೀಡಾಕೂಟದ ಸಂಘಟನೆಯ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ ವಿವರಣೆಯನ್ನು ನೀಡಿ ಹಿರಿಯ ವಿದ್ಯಾರ್ಥಿಗಳಲ್ಲಿ ಸಹಕಾರವನ್ನು ಯಾಚಿಸಿದರು. ಸಹಶಿಕ್ಷಕಿ ಸವಿತಾ ಸ್ವಾಗತಿಸಿ, ಸಹಶಿಕ್ಷಕಿ ಜ್ಯೋತಿ .ಜೆ .ರೈ ವಂದಿಸಿ , ಕಂಪ್ಯೂಟರ್ ಶಿಕ್ಷಕಿ ಅನಿತಾ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿ ,ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.