ದರ್ಖಾಸ್ತು: 3ನೇ ಟೆಸ್ಟ್ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಕೂಟ

0

ಪ್ರಥಮ ಸ್ಥಾನ ‘Red Backs ‘ ದ್ವಿತೀಯ ಸ್ಥಾನ ‘Red Wings’ ತಂಡ

ಬೆಳ್ಳಾರೆ ಗ್ರಾಮದ ದರ್ಖಾಸ್ತು ಇಲ್ಲಿನ ಶಾಲಾ ಮೈದಾನದಲ್ಲಿ ಆ.6ರಂದು ಕ್ರಿಕೆಟ್ ಪಂದ್ಯಾಟ ಕೂಟ ನಡೆಯಿತು.

ಪಂದ್ಯಾಟವನ್ನು ತಂಡದ ಹಿರಿಯ ಸದಸ್ಯ ಹರೀಶ್ ಚೂಂತಾರು ಉದ್ಘಾಟಿಸಿದರು.

ಇದರಲ್ಲಿ ತಂಡ ಪ್ರಥಮ ಸ್ಥಾನ ‘Red Backs ‘ ದ್ವಿತೀಯ ಸ್ಥಾನ ‘Red Wings ‘ ಪಡೆದುಕೊಂಡಿತು.

ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ತಂಡದ ಹಿರಿಯ ಸದಸ್ಯರಾದ ಹರೀಶ್ ಚೂಂತಾರು ಇವರನ್ನು ಅತಿಥಿಗಳಾಗಿ ಆಗಮಿಸಿದ ಶಂಕರ್ ಲಿಂಗಂ ಎಮ್. ಇವರು ಸನ್ಮಾನಿಸಿ, ಶುಭಹಾರೈಸಿದರು.

ಪ್ರೇಮ ಕಲ್ಲೋಣಿ ಅತಿಥಿಯಾಗಿ ಭಾಗವಹಿಸಿದ್ದರು.

ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ಶಮೀಲ್ ಕಲ್ಲೋಣಿ ಅವರು ಮಾಡಿದರು.