ಸ್ವಾತಂತ್ರ್ಯೋತ್ಸವದ ಸಂದರ್ಭ ನೀಡಲಾಗುವ ಪ್ರಶಸ್ತಿ; ನಾಳೆ ಪ್ರಶಸ್ತಿ ಪ್ರದಾನ
ಗುಜರಾತ್ ಸರಕಾರವು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀಡುವ ರಾಜ್ಯ ಪ್ರಶಸ್ತಿಗೆ ಪರಿಸರ ಕ್ಷೇತ್ರದಿಂದ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ.ನಾಯರ್ ಭಾಜನರಾಗಿದ್ದಾರೆ.
ಮೂಲತಃ ಸುಳ್ಯ ತಾಲೂಕಿನ ಜಾಲ್ಸೂರಿನವರಾದ ಡಾ. ಆರ್.ಕೆ. ನಾಯರ್ ಅವರು ಗುಜರಾತ್ ನಲ್ಲಿ ಉದ್ಯಮಿಯಾಗಿದ್ದು ಕಳೆದ ಅನೇಕ ವರ್ಷಗಳಿಂದ ಪರಿಸರ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.















ಮಿಯಾವಕಿ ಮಾದರಿ ಅರಣ್ಯ ನಿರ್ಮಿಸುವ ಪರಿಸರ ಕ್ರಾಂತಿ ಮಾಡಿರುವ ನಾಯರ್ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಗಿಡಗಳನ್ನು ನೆಟ್ಟು ವನ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಕಛ್ ನಲ್ಲಿ ಇವರ ನಿರ್ಮಾಣದ ಸ್ಮೃತಿ ವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದರು.
ಈ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ಸಂಜೆ ನಡೆಯಲಿದ್ದು ಗುಜರಾತ್ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ. ಆ. 15 ರಂದು ಗುಜರಾತ್ ಸರ್ಕಾರದ ಆಹ್ವಾನಿತ ಅತಿಥಿಯಾಗಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.









