ಸಂಪಾಜೆ:ಎಸ್‌ಡಿಪಿಐ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

0

ಸಂಪಾಜೆ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಮತ್ತು ಸಂಪಾಜೆ ಬೂತ್ ವತಿಯಿಂದ 77ನೇ ವರ್ಷದ ಸ್ವಾತಂತ್ರೋತ್ಸವ ಕಾರ್ಯಕ್ರಮ ಸಂಪಾಜೆಯ ದೊಡ್ಡಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್ಡಿಪಿಐ ಸಂಪಾಜೆಯ ಭೂತ್ ಅಧ್ಯಕ್ಷರಾದ ಮರ್ಝೂಕ್ ಕಡೆಪಾಲ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ರವರು ಧ್ವಜಾರೋಹಣ ನೆರವೇರಿಸಿದರು,


ಅಡ್ವೋಕೇಟ್ ರಷೀದ್ ಗೂನಡ್ಕ ಸ್ವಾತಂತ್ರ್ಯ ಸಂಧೇಶ ಭಾಷಣಗೈದರು.
ಮುಖ್ಯ ಅತಿಥಿಗಳಾಗಿ, ಅನಿವಾಸಿ ಭಾರತೀಯ ಯೂನುಸ್ ಪಿ. ಯು. ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ ಸಧಸ್ಯರಾದ ಅಶ್ರಫ್ ಟರ್ಲಿ, ಸುಳ್ಯ ಬ್ಲಾಕ್ ಅಧ್ಯಕ್ಷರಾದ ಮೀರಾಝ್ ಸುಳ್ಯ, ಬ್ಲಾಕ್ ಸಮಿತಿ ಸದಸ್ಯರಾದ ಸಿದ್ದೀಕ್, ಸಂಪಾಜೆ ಬೂತ್ ಉಪಾಧ್ಯಕ್ಷರಾದ ನಶ್ಫಾನ್, ಜೊತೆ ಕಾರ್ಯದರ್ಶಿ ರಶೀದ್, ಅರಂಬೂರು ಬೂತ್ ಅಧ್ಯಕ್ಷರಾದ ಅಲ್ತಾಫ್, ಕಾರ್ಯದರ್ಶಿ ರಹೀಮ್,ಇಬ್ರಾಹಿಂ ದೊಡ್ಡಡ್ಕ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.