ಉಮೇಶ್ ಚಿಕ್ಕಿನಡ್ಕ ನಿಧನ

0

ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಕಾಲನಿ‌ ನಿವಾಸಿ ಬಾಬು ಎಂಬವರ ಪುತ್ರ ಉಮೇಶ್ ಚಿಕ್ಕಿನಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 29 ವರ್ಷ ವಯಸ್ಸಾಗಿತ್ತು.

ಕಳೆದ 8 ತಿಂಗಳ ಹಿಂದೆ ಕಾಣಿಯೂರಿನಲ್ಲಿ ಅಡಿಕೆಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ಅಡಿಕೆ ಮರದಿಂದ ಆಯ ತಪ್ಪಿ ಬಿದ್ದು ಸೊಂಟಕ್ಕೆ ಏಟಾಗಿ ಮಲಗಿದಲ್ಲೇ ಇದ್ದರು. ಇತ್ತೀಚೆಗೆ ಕಳೆದ ಒಂದು ವಾರದ ಹಿಂದೆ ಅನಾರೋಗ್ಯ ಉಲ್ಭಣಗೊಂಡಿದ್ದು ಅವರನ್ನು ಸುಳ್ಯಖಾಸಗಿ ಆಸ್ಪತ್ರೆಗೆ
ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ‌ಇಂದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ತಂದೆ, ಸಹೋದರ ನಾಗೇಶ್ ಚಿಕ್ಕಿನಡ್ಕ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.