ಸುಬ್ರಹ್ಮಣ್ಯ: ಉಚಿತ ಫೂಟ್ ತೆರಪಿ ಚಿಕಿತ್ಸೆ ಮುಕ್ತಾಯ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಉಚಿತವಾಗಿ ನಡೆದ ಫೂಟ್ ತೆರಪಿ ಚಿಕಿತ್ಸೆ ಸೆ.2 ರಂದು ಮುಕ್ತಾಯವಾಯಿತು.

ವಿಶೇಷವಾಗಿ ತರಭೇತಿ ಕಾರ್ಯಗಾರ ಆಯೋಜಿಸಲಾಗಿದ್ದು ಅದನ್ನು ದೀಪ ಬೆಳಗಿಸಿ ಅಧ್ಯಕ್ಷತೆಯನ್ನು ವಹಿಸಿದ್ದ ಸುಬ್ರಹ್ಮಣ್ಯ ಗ್ರಾ ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ ಉದ್ಘಾಟಿಸಿದರು .

ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾ. ಪಂ. ಉಪಾಧ್ಯಕ್ಷ ಎಚ್.ಎಲ್. ವೆಂಕಟೇಶ್, ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಅಧ್ಯಕ್ಷ ವಿಶ್ವನಾಥ ನಡುತೋಟ , ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆಮಜಲ್ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್, ಪುತ್ತೂರು ನೆಮ್ಮದಿ ವೆಲ್ನೆಸ್ ಸೆಂಟರ್ ನ ಮುಖ್ಯಸ್ಥ ಪ್ರಭಾಕರ ಸಾಲಿಯಾನ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಂಗಳೂರು ಕೆ ಮ್ಯಾಕ್ಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ರತ್ನಾಕರ ಶೆಟ್ಟಿ, ಪುತ್ತೂರು ನೆಮ್ಮದಿ ಸೆಂಟರ್ನ ಮುಖ್ಯಸ್ಥ ಪ್ರಭಾಕರ ಸಾಲಿಯನ್ , ಸಹಾಯಕರುಗಳಾದ ಪ್ರಶಾಂತ್ ನೀರ್ಕಜೆ ,ಹಾಗೂ ಸಂಧ್ಯಾ ನೀರ್ಕಜೆ ಅವರುಗಳನ್ನು ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಅವರು ಸನ್ಮಾನಿಸಿದರು. ಪ್ರಭಾಕರ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

ವಿಶ್ವನಾಥ ನಡುತೋಟ ಸ್ವಾಗತಿಸಿ ಮೋನಪ್ಪ ಡಿ ಧನ್ಯವಾದ ಸಮರ್ಪಿಸಿದರು. ಕಳೆದ ಹತ್ತು ದಿನಗಳಿಂದ ನಿರಂತರವಾಗಿ 900 ಜನ ಸಾರ್ವಜನಿಕರು ಬಂದು ಇದರ ಪ್ರಯೋಜನವನ್ನು ಪಡೆದುಕೊಂಡರು. ರವಿ ಕಕ್ಕೆ ಪದವು ಸಮಾಜ ಸೇವ ಟ್ರಸ್ಟ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಿದ್ದವು.