ಗುರು ಬ್ರಹ್ಮ, ಗುರು ವಿಷ್ಣು ,ಗುರು ದೇವೋ ಮಹೇಶ್ವರಃ ,ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ…..
ಬದುಕಿಗೆ ಹೊಸ ಅರ್ಥ ಕಲ್ಪಿಸುತ್ತಾ ಕಲಿಕೆಯ ಮೆಟ್ಟಿಲಾಗಿ ಅಕ್ಷರಗಳ ಕಲಿಸಿದ ದೀವಿಗೆಯಾಗಿ, ಪ್ರತಿಯೊಂದು ತಪ್ಪುಗಳನ್ನು ಪ್ರೀತಿಯಿಂದ ತಿದ್ದಿ ತೀಡಿ ಬೆಳೆಸಿದ ನನ್ನೆಲ್ಲಾ ಪ್ರೀತಿಯ ಶಿಕ್ಷಕರಿಗೆ ನನ್ನ ನಮನಗಳು……
ಸೆಪ್ಟೆಂಬರ್ 5 ಈ ದಿನ ಡಾ .ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ.ಅದೊಂದು ದಿನ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ದಿನ ಅದ್ದೂರಿಯಾಗಿ ಆಚರಿಸುವ ಸಂದರ್ಭದಲ್ಲಿ ರಾಧಾಕೃಷ್ಣನ್ ರವರು ಹೀಗೆ ನುಡಿದರಂತೆ — ನನ್ನ ಹೆಸರಿನಲ್ಲಿ ಹುಟ್ಟುಹಬ್ಬದ ಆಚರಣೆ ಮಾಡಬೇಡಿ. ಈ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಿ ಎಂದು ನುಡಿದು ಇಡೀ ಶಿಕ್ಷಕ ಸಮುದಾಯಕ್ಕೆ ಒಂದು ಗೌರವವನ್ನು ತಂದುಕೊಟ್ಟರು. ಅಂದಿನಿಂದ ಈ ದಿನವನ್ನು ಭಾರತ ದೇಶದಲ್ಲಿ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ವಿದ್ಯಾರ್ಥಿಗಳ ಬೆನ್ನ ಹಿಂದೆ ನಿಂತು ಸದಾ ನಮ್ಮ ಗೆಲುವಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತ ಕೇವಲ ಪುಸ್ತಕದ ಜ್ಞಾನವನ್ನು ಮಾತ್ರ ಭೋಧಿಸದೆ ಪ್ರಪಂಚದ ಜ್ಞಾನವನ್ನು ,ಕೌಶಲ್ಯಗಳನ್ನು ಕಲಿಸುತ್ತಾ ನಮ್ಮ ಆತ್ಮಸ್ಥೈರ್ಯ ತುಂಬುವ ವ್ಯಕ್ತಿತ್ವವೇ ಶಿಕ್ಷಕರದ್ದು.. ಕಠಿಣತೆಯ ದಾರಿಯನ್ನು ಎದುರಿಸುವ,ಸದಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ,ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಅಡಿಪಾಯ ಹಾಕಿದ, ಆತ್ಮವಿಶ್ವಾಸ ತುಂಬಿ ನಮ್ಮ ಜೀವನದಲ್ಲಿ ಶಿಕ್ಷಕರು ಮಹತ್ತರವಾದ ಪಾತ್ರ ವಹಿಸುತ್ತಾರೆ. ನಮ್ಮ ಬಾಳಿನಲ್ಲಿ ಅದೃಶ್ಯ, ಅವ್ಯಕ್ತ ರೂಪದ ಶಕ್ತಿಯಾಗಿ ನಮಗೆ ಭೋಧಿಸುತ್ತಾರೆ.
ನಮ್ಮ ಜೀವನದಲ್ಲಿ ಕೇವಲ ಪುಸ್ತಕದ ಜ್ಞಾನವನ್ನು ತಿಳಿಸುವವರು ಮಾತ್ರ ಗುರುವೆಂದು ಭಾವಿಸುವುದು ಮನುಷ್ಯನ ತಪ್ಪು ಕಲ್ಪನೆ. ಬದುಕಿನ ಪ್ರತಿಯೊಂದು ತಿರುವಿನಲ್ಲಿ ಹೊಸ ಹೊಸ ವಿಚಾರಗಳನ್ನು ತಿಳಿಸಿ ಪಾಠವನ್ನು ತಿಳಿಸಿಕೊಡುವವರು ಗುರುಗಳೇ ಎಂದೂ ಹೇಳಿದರೂ ತಪ್ಪಾಗದು.
ಪ್ರತಿಯೊಬ್ಬ ಗುರುವು ಸಹ ವಿದ್ಯಾರ್ಥಿಗಳ ಹಿಂದೆ ತನ್ನ ಕಠಿಣ ಪರಿಶ್ರಮ ಹಾಕಿ ಮುಂದೊಂದು ದಿನ ಅವರ ಯಶಸ್ಸನ್ನು ಪ್ರತಿಯೊಬ್ಬ ಗುರುವು ಬಯಸುತ್ತಾರೆ.
ವೃತ್ತಿಯಲ್ಲಿ ಮಾತ್ರ ಶಿಕ್ಷಕರಾಗಿ, ಒರಟು ಸ್ವಭಾವದಂತೆ ಕಂಡರೂ ಮುಗ್ದವಾದ, ಪ್ರೇಮಮಯವಾದ ಅಮ್ಮನಂತೆ ಪ್ರೀತಿಯನ್ನು ನೀಡುವ ವಾತ್ಸಲ್ಯಮಯಿಯಾಗಿ ಪ್ರೀತಿಯಿಂದ ಪಾಠ ಹೇಳಿ ಕೊಡುವ ಎಲ್ಲಾ ಶಿಕ್ಷಕರನ್ನು ಈ ದಿನ ಪ್ರೀತಿಯಿಂದ ಗೌರವವನ್ನು ಅರ್ಪಿಸೋಣ…
ಹೀಗೆ ನಾನು ನನ್ನ ಜೀವನದಲ್ಲಿ ಪ್ರತಿಯೊಬ್ಬ ಗುರುವಿನಿಂದ ಹೊಸ ಹೊಸ ಪಾಠಗಳನ್ನು ಕಲಿತಿದ್ದೇನೆ. ಈ ಸಂದರ್ಭದಲ್ಲಿ ನನ್ನೆಲ್ಲ ಪ್ರೀತಿಯ ಗುರುಗಳನ್ನ ಸ್ಮರಿಸುತ್ತ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ………
✍🏻ಸುಶ್ಮಿತಾ ಯು. ಯಂ ಉಗ್ರಾಣಿ ಮನೆ ಮಂಡೆಕೋಲು
ಪ್ರಥಮ ಪಿ. ಯು. ಸಿ. ವಿಜ್ಞಾನ ವಿಭಾಗ .ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ