ಸುಬ್ರಹ್ಮಣ್ಯ ಗ್ರಾ.ಪಂ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಂಯೋಜನೆಯೊಂದಿಗೆ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ
ಸುಬ್ರಹ್ಮಣ್ಯ ಗ್ರಾ.ಪಂ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳ ಸಂಯೋಜನೆಯೊಂದಿಗೆ ಸ್ವಚ್ಛ ಭಾರತ್ ಮಿಷನ್ ಬೃಹತ್ ಸ್ವಚ್ಛತಾ ಅಭಿಯಾನ”ದ ಸಮಾರೋಪ ಸಭಾ ಸಮಾರಂಭ, ನರೇಗಾ ವಿಶೇಷ ಗ್ರಾಮ ಸಭೆ, ಮಹಾತ್ಮ ಗಾಂಧೀಜಿಯವರ ಹಾಗೂ ಪ್ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಜನ್ಮದಿನದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ ಅ.2 ರಂದು ಹಮ್ಮಿಕೊಳ್ಳಲಾಗಿತ್ತು.
ಆರಂಭದಲ್ಲಿ ಗಾಂದೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.. ಸುಬ್ರಹ್ಮಣ್ಯ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿನ ಪೇಟೆಯ ಪರಿಸರಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ, ಕಾಲೋನಿಗಳಲ್ಲಿ, ರಸ್ತೆ ಬದಿಗಳಲ್ಲಿ, ಕೊಳಚೆಗೇರಿ ಪ್ರದೇಶಗಳಲ್ಲಿ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ & ಆದಿ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತಮುತ್ತಲಿನ ವಠಾರಗಳಲ್ಲಿ, ರಥ ಬೀದಿಗಳಲ್ಲಿ ಹಾಗೂ ಕುಮಾರಧಾರ ಸ್ನಾನಘಟ್ಟದ ಸುತ್ತಮುತ್ತಲಿನ ವಠಾರಗಳಲ್ಲಿ ಸ್ವಚ್ಛತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಹಾಗು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಸ್ವಚ್ಛತಾ ನೀತಿಗಳನ್ನು ಧ್ವನಿವರ್ಧಕದ ಮೂಲಕ ಪ್ರಚಾರಪಡಿಸಲಾಯಿತು.
ಈ “ಬೃಹತ್ ಸ್ವಚ್ಛತಾ ಅಭಿಯಾನ”ದ ಕಾರ್ಯಕ್ರಮದಡಿಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಸುಬ್ರಹ್ಮಣ್ಯ, ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ, ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಎನ್ಎಸ್ಎಸ್ & ಯೂತ್ ರೆಡ್ ಕ್ರಾಸ್ ಘಟಕಗಳು, ಲಯನ್ಸ್ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಕುಕ್ಕೇಶ್ರೀ ಜೆಸಿಐ ಸುಬ್ರಹ್ಮಣ್ಯ, ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ, ವರ್ತಕರ ಸಂಘ ಸುಬ್ರಹ್ಮಣ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ & ಏನೆಕಲ್ಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳು, ನವೋದಯ ಸ್ವಹಾಯ ಸಂಘಗಳು, ಶ್ರೀ ಕ್ಷೇತ್ರ ಒಡಿಯೂರು ಸ್ವಸಹಾಯ ಸಂಘಗಳು, ಕುಕ್ಕೇ ಶ್ರೀ & ಬಿಎಂಎಸ್ ಅಟೋ ಹಾಗೂ ಟ್ಯಾಕ್ಸಿ ಚಾಲಕ-ಮಾಲಕರ ಸಂಘಗಳು ಸುಬ್ರಹ್ಮಣ್ಯ, ಸಹಕಾರಿ ಸಂಸ್ಥೆಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಯುವಕ ಹಾಗೂ ಯುವತಿ ಮಂಡಲಗಳು, ಸ್ಪೋರ್ಟ್ಸ್ ಕ್ಲಬ್ ಗಳು, ಶ್ರೀ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ, ಇನ್ನಿತರ ವಿವಿಧ ಧಾರ್ಮಿಕ ಸಂಸ್ಥೆಗಳು, ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗೂ ಉಳ್ಳಾಕುಲು-ಉಳ್ಳಾಲ್ತಿ-ಬಚ್ಚ ನಾಯಕ ದೈವಸ್ಥಾನ ಏನೆಕಲ್ಲು, ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ, ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ, ನಿಸರ್ಗ ಯುವಕ ಮಂಡಲ ಐನೆಕಿದು, ಐನೆಕಿದು-ಸುಬ್ರಹ್ಮಣ್ಯ ಕೃಷಿಪತ್ತಿನ ಸೇವಾ ಸಹಕಾರಿ ಸಂಘ ಸುಬ್ರಹ್ಮಣ್ಯ, ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ಸುಬ್ರಹ್ಮಣ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಏನೆಕಲ್ಲು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸುಬ್ರಹ್ಮಣ್ಯ & ಏನೆಕಲ್ಲು, ಶ್ರೀ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ, ಸ್ವಸಹಾಯ ಸಂಘಗಳು ಹಾಗೂ ಇನ್ನಿತರ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು-ಸದಸ್ಯರು ಮತ್ತು ಗ್ರಾಮಸ್ಥರು’, ಊರವರು-ಸಾರ್ವಜನಿಕರು ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮತ್ತು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ವತಿಯಿಂದ ಕಸ-ತ್ಯಾಜ್ಯಗಳ ವಿಲೇವಾರಿಗಾಗಿ ಗೋಣಿ ಚೀಲಗಳನ್ನು ಹಾಗೂ ವಾಹನಗಳನ್ನು ನೀಡಿ ಸಹಕರಿಸಿರುತ್ತಾರೆ.