ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಯೋಗ ಕಾರ್ಯಾಗಾರ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಸಂವಿತ್ ರೀಸರ್ಚ್ ಫೌಂಡೇಶನ್ ಬೆಂಗಳೂರು ಇವರಿಂದ ಶಿಕ್ಷಕರಿಗೆ ಒಂದು ದಿನದ ಸಂವಿತ್ ಯೋಗ ಜೀವನ ಕಾರ್ಯಗಾರವನ್ನು ಆಯೋಜಿಸಲಾಯಿತು.
ಆಧುನಿಕತೆ, ತಂತ್ರ ಜ್ಞಾನದ ಬೆಳವಣಿಗೆ,ಮಾನವನ ಆಧುನಿಕ ಜೀವನ ಶೈಲಿ ಇದರ ಪರಿಣಾಮವಾಗಿ ಮನುಷ್ಯ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾನೆ. ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ಧಿ, ಭಾವನೆ, ಆತ್ಮ ಹಾಗೂ ಅಹಂಕಾರಗಳನ್ನು ತೊಡೆದು ಹಾಕುವ ಅಭ್ಯಾಸವನ್ನು ಮಾಡಿಸುತ್ತದೆ ಎಂದು ಯೋಗ ತರಬೇತುದಾರರಾಗಿ ಆಗಮಿಸಿದ ಚಂದ್ರಶೇಖರ್ ನುಡಿದರು.
ಪ್ರತಿಯೊಬ್ಬ ಶಿಕ್ಷಕರು ತಮ್ಮ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರೊಂದಿಗೆ ವಿದ್ಯಾರ್ಥಿಗಳಿಗೂ ಮಾರ್ಗ ಸೂಚನೆ ನೀಡಬೇಕೆಂಬ ಸಂದೇಶವೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಈ ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ ಆಗಮಿಸಿದ ಚಂದ್ರಶೇಖರ್ ಕ್ರೀಡಾ ಯೋಗ ಕಥಾಯೋಗ ಸೂರ್ಯನಮಸ್ಕಾರ ನಾಡಿಶೋಧನ ಪ್ರಾಣಾಯಾಮ, ಬ್ರಾಹ್ಮರಿ ಪ್ರಾಣಾಯಾಮ ಹೀಗೆ ಮುಂತಾದ ಹಲವು ರೀತಿಯ ಯೋಗಭ್ಯಾಸಗಳನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅತ್ಯಂತ ಉತ್ಸಾಹದಿಂದ ಈ ಕಾರ್ಯಗಾರದಲ್ಲಿ ಪಾಲ್ಗೊಂಡರು.