ಕಡಬವನ್ನು ನೂತನ ತಾಲೂಕನ್ನಾಗಿ ರಚಿಸಲಾಗಿದ್ದು, ತಾಲೂಕಿಗೆ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಕಛೇರಿಯನ್ನು ಪ್ರಾರಂಭಿಸಿರುವುದಿಲ್ಲ ಪ್ರಸ್ತುತ ಸುಬ್ರಹ್ಮಣ್ಯದಲ್ಲಿ ಲೋಕೋಪಯೋಗಿ ಉಪವಿಭಾಗ ಕಡಬಕ್ಕೆ ಸ್ಥಳಾಂತರಿಸಬೇಕಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಬೆಂಗಳೂರು ಕಛೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
















ಮನವಿಗೆ ಸ್ಪಂದಿಸಿದ ಸಚಿವರು ಪರಿಶೀಲಿಸಿ ಬೇಕಾದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.









