ನೆಹರು ಮೆಮೋರಿಯಲ್ ಕಾಲೇಜು : ನನ್ನ ಖಾದಿ ನನ್ನ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ

0

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಯು.ಜಿ.ಸಿ ಚಟುವಟಿಕೆ ಕೋಶದ ವತಿಯಿಂದ ನನ್ನ ಖಾದಿ ನನ್ನ ಪ್ರತಿಜ್ಞೆ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆವರಣದಲ್ಲಿ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಯು.ಜಿ.ಸಿ ಚಟುವಟಿಕೆ ಕೋಶದ ಸಂಚಾಲಕರಾದ ಡಾ. ವಿಜಯಲಕ್ಷ್ಮಿಎನ್. ಎಸ್ ಅವರು ಬೋಧಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ಅವರು ಮಾತನಾಡಿ ಖಾದಿಮಹೋತ್ಸವದ ಆಯೋಜನೆಯ ಕಾಯಕಲ್ಪದ ಮಹತ್ವ ಹಾಗೂ ಸರಕಾರದ ವತಿಯಿಂದ ನೀಡಲ್ಪಡುತ್ತಿರುವ ಪ್ರಮಾಣ ಪತ್ರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ, ಬೋಧಕೇತರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.