ಸುಳ್ಯ ರೋಟರಿ ವಿದ್ಯಾಸಂಸ್ಥೆ ಆವರಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಣೆ

0

68ನೇ ಕನ್ನಡ ರಾಜ್ಯೋತ್ಸವವನ್ನು ಸುಳ್ಯ ರೋಟರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನ.1 ರಂದು ವಿಜೃಂಭಣೆಯಿಂದ ನಡೆಯಿತು. ರೋಟರಿ ಅಧ್ಯಕ್ಷ ರೊ.ಆನಂದ ಖಂಡಿಗರವರು ರಾಷ್ಟ್ರಧ್ವಜಾರೋಹಣಗೈದು ಸಂದೇಶವನ್ನು ನೀಡಿದರು.


ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕ ರೊ. P.P.PHF ಗಿರಿಜಾ ಶಂಕರ್. ಟಿ ರವರು ನಾಡ ಧ್ವಜಾರೋಹಣವನ್ನು ನಡೆಸಿ ದಿನದ ಮಹತ್ವವನ್ನು ವರ್ಣಿಸಿದರು. ರೋಟರಿ ವಿದ್ಯಾ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ರೊ. ರಾಮಚಂದ್ರ ಪಿ., ರೋಟರಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ರೊ.ಮಹಾಲಕ್ಷ್ಮಿ ಕೊರಂಬಡ್ಕ , ರೊ. ಪ್ರಭಾಕರನ್ ನಾಯರ್, ರೊ. ಬೆಳ್ಯಪ್ಪ ಗೌಡ, ಪೂರ್ವ ಸಂಚಾಲಕರಾದ ರೊ.ಗಣೇಶ್ ಭಟ್, ರೊ. ಶ್ರೀಕೃಷ್ಣ .ಭಟ್ , ರೊ.ಪ್ರಭಾಕರ ನಾಯರ್, ರೊ.ಭಾಸ್ಕರ ನಾಯರ್, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶ್ಮಿತಾ ಸ್ವಾಗತಿಸಿ, ಪ್ರೌಢ ಶಾಲಾ ವಿದ್ಯಾರ್ಥಿನಿ ಸಿಂಚನಾ ವಂದಿಸಿದರು.ಶಾಲಾ ನಾಯಕಿ ಭಾನವಿ ಕೊಯಿಂಗಾಜೆ ನಿರೂಪಿಸಿದರು.