ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು ಇದರ ಆಶ್ರಯದಲ್ಲಿ ನಡೆದ ಫ್ರೌಢ ಶಾಲಾ ಮಕ್ಕಳ ಲೀಗ್ ಮಾದರಿಯ ಸೂರ್ಯ ಬೆಳಕಿನ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ

0

ಕ್ಲಾಸಿಕಲ್ ಫ್ರೆಂಡ್ಸ್ ಕೂಟೇಲು ( ಪ್ರಥಮ), ಕುಕ್ಕoದೂರು ( ದ್ವಿತೀಯ) , ಎಸ್.ಆರ್ ಕೂಟೇಲು (ತೃತೀಯ) , ಜೋಲಿ ಫ್ರೆಂಡ್ಸ್ ಕಾವು ( ಚತುರ್ಥ)

ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲು (ರಿ) ಇದರ ಆಶ್ರಯದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ 8 ನೇ ತರಗತಿಯಿಂದ 10 ನೇ ತರಗತಿಯ ಪ್ರೌಢ ಶಾಲಾ ಮಕ್ಕಳ 8 ತಂಡಗಳ ಲೀಗ್ ಮಾದರಿಯ ಸೂರ್ಯ ಬೆಳಕಿನ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಹಾಗೂ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಸರಕಾರಿ ಪ್ರೌಢ ಶಾಲೆ ದುಗ್ಗ ಲಡ್ಕ ಕ್ರೀಡಾಂಗಣದಲ್ಲಿ ಏ.14 ರಂದು ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಟಿ ವಿಶ್ವನಾಥ ವಹಿಸಿದರು.ಬಳಿಕ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ಗಳಿಸಿದ ಕ್ಲಾಸಿಕಲ್ ಫ್ರೆಂಡ್ಸ್ ಕೂಟೇಲು , ದ್ವಿತೀಯ ಬಹುಮಾನವನ್ನು ಕುಕ್ಕುಂದೂರು, ತೃತೀಯ ಎಸ್.ಆರ್ ಕೂಟೇಲು, ಚತುರ್ಥ ಬಹುಮಾನವನ್ನು ಜೋಲಿ ಫ್ರೆಂಡ್ಸ್ ಕಾವು ತಂಡಗಳಿಗೆ ಹಾಗೂ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್ , ಬೆಸ್ಟ್ ಆಲ್ ರೌಂಡರ್ ವೈಯಕ್ತಿಕ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗುತ್ತಿಗಾರು ವಲಯದ ರಬ್ಬರ್ ಟ್ಯಾಪರ್ ಸಂಘ ಅಧ್ಯಕ್ಷ ಭಾಸ್ಕರ ಕೂಟೇಲು, ಸುಳ್ಯ ಕರ್ನಾಟಕ ಕಾರ್ಮಿಕ ರಬ್ಬರ್ ಸಂಘದ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಕೂಟೇಲು, ಶಕ್ತಿ ಫ್ರೆಂಡ್ಸ್ ಕ್ಲಬ್ (ರಿ) ಕೂಟೇಲು ಮಾಜಿ ಅಧ್ಯಕ್ಷ ಸೆಲ್ವ ರಾಜ್ ಕೂಟೇಲು, ಸುಳ್ಯ ಬಜಾಜ್ ಫೈನಾನ್ಸ್ ಮ್ಯಾನೇಜರ್ ಚಂದ್ರಹಾಸ್ ಕಿಲಾರ್ ಕಜೆ , ದುಗ್ಗ ಲಡ್ಕ ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ, ಶಕ್ತಿ ಫ್ರೆಂಡ್ಸ್ ಕ್ಲಬ್ ಕೂಟೇಲುನ ಗೌರವಾಧ್ಯಕ್ಷ ವಿಜಯ ಕಾಂತ್, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಬಶೀರ್ ಆರ್. ಬಿ, ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರರು ಶಿವಕುಮಾರ್ ಕೂಟೇಲು ಹಾಗೂ ಕೊಡುಗೆ ದಾನಿಗಳು, ಆಡಳಿತ ಮಂಡಳಿ ಸರ್ವ ಸದಸ್ಯರು , ಊರಿನವರು ಉಪಸ್ಥಿತರಿದ್ದರು.

ಕಬಡ್ಡಿ ಪಂದ್ಯಾಟದ ವೀಕ್ಷಕ ವಿವಾರಣೆಗಾರ ಪ್ರಸಾದ್ ಕಾಟೂರು ಸರ್ವರನ್ನು ಸ್ವಾಗತಿಸಿ , ವಂದಿಸಿದರು.