ಸುಳ್ಯದಲ್ಲಿ ಭಾರೀ ಗಾಳಿ ಮಳೆ

0

ಸುಳ್ಯ ನಗರದಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ಗಾಳಿ ನೂರಾರು ಕಿಲೋಮೀಟರ್ ವೇಗದಲ್ಲಿ ಬೀಸುತ್ತಿದೆ.

ಕೆಲವು ವಾಣಿಜ್ಯ ಸಂಕೀರ್ಣಗಳ ಮತ್ತು ಮನೆಗಳ ಮೇಲ್ಛಾವಣಿಗೆ ಅಳವಡಿಸಿದ ಶೀಟ್‌ಗಳು ಹಾರಿಹೋಗುತ್ತಿದೆ. ಕಟ್ಟಡಗಳ ಜಗುಲಿಯಲ್ಲಿ ಮತ್ತು ಮನೆಗಳ ಅಂಗಳದಲ್ಲಿ ಇರುವ ಕೆಲವು ವಸ್ತುಗಳು ಹಾರಿ ಹೋಗುತ್ತಿದೆ. ಜೊತೆಗೆ ತೀವ್ರ ಗುಡುಗು ಸಿಡಿಲು ಕೂಡಾ ಇದ್ದು, ಜನರು ಆತಂಕಿತರಾಗಿದ್ದಾರೆ.