ನ.24: ಜಾಲ್ಸೂರಿನಲ್ಲಿ ಸ್ಮೈಲ್ ವಿಜ಼್ ದಂತ ಚಿಕಿತ್ಸಾಲಯ ಶುಭಾರಂಭ

0

ಜಾಲ್ಸೂರಿನ ಎನ್.ಇ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಡಾ. ಸಂದೀಪ್ ಬಿರ್ಮುಕಜೆ ಅವರ ಮಾಲಕತ್ವದ ಸ್ಮೈಲ್ ವಿಜ಼್ ದಂತ ಚಿಕಿತ್ಸಾಲಯವು ನ.24ರಂದು ಶುಭಾರಂಭಗೊಳ್ಳಲಿದೆ.

ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹವನ, ಧನ್ವಂತರಿ ಪೂಜೆ ನಡೆಯಲಿದೆ.
ಬಳಿಕ ನೂತನ ದಂತ ಚಿಕಿತ್ಸಾಲಯವನ್ನು ಸಂದೀಪ್ ಅವರ ತಂದೆ ಸುಧಾಕರ ಬಿರ್ಮುಕಜೆ ಹಾಗೂ ತಾಯಿ ಶ್ರೀಮತಿ ಉದಯಗೌರಿ ಅವರು ಉದ್ಘಾಟಿಸಲಿದ್ದಾರೆ.