ಆಲೆಟ್ಟಿ
ಗ್ರಾಮ ಪಂಚಾಯತ್ ಇದರ ಗ್ರಂಥಾಲಯದ ಮಾಹಿತಿ ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ
ಕಾರ್ಯಕ್ರಮವು ನ.22 ರಂದು ನಡೆಯಿತು.
ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾಕುಮಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಆಲೆಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು.
ಶಿಕ್ಷಣ ಫೌಂಡೇಶನ್ ತಾಲೂಕು ಸಂಯೋಜಕ ದಿನೇಶ್ ಡಿಜಿಟಲ್ ಲೈಬ್ರರಿಯ ಕುರಿತು ವಿವರಿಸಿದರು.
ವೇದಿಕೆಯಲ್ಲಿ ಅರಂಬೂರು ಇಡ್ಯಡ್ಕ ಶಾಲಾ ಶಿಕ್ಷಕ ಧನಂಜಯ, ಪಂಚಾಯತ್ ಉಪಾಧ್ಯಕ್ಷೆ ಶ್ರಿಮತಿ ಕಮಲ ನಾಗಪಟ್ಟಣ, ಪಂ.
ಸದಸ್ಯ ಚಂದ್ರಕಾಂತ ನಾರ್ಕೋಡು,
ಪಂ.ಪ್ರಭಾರ ಪಿ ಡಿ ಓ ಸೃಜನ್ ಎ.ಜಿ ಉಪಸ್ಥಿತರಿದ್ದರು.
ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ
ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು, ಪಂಚಾಯತ್ ಸಿಬ್ಬಂದಿ ವರ್ಗದವರು, ಸಂಜೀವಿನಿ ಸಂಘದ ಪ್ರೇರಕಿ ಮತ್ತು ಸದಸ್ಯರು ಭಾಗವಹಿಸಿದರು.
ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು ಸ್ವಾಗತಿಸಿದರು.
ಗ್ರಂಥಾಲಯ ಮೇಲ್ವಿಚಾರಕಿ ಶ್ರಿಮತಿ ರಾಜೇಶ್ವರಿ ಆಲೆಟ್ಟಿ ವಂದಿಸಿದರು.