ಸುಳ್ಯ ನಗರ ಪಂಚಾಯತ್ ವತಿಯಿಂದ ಸಂವಿಧಾನ ದಿನಾಚರಣೆ

0

ಸುಳ್ಯ ನಗರ ಪಂಚಾಯತ್ ವತಿಯಿಂದ ಸಂವಿಧಾನ ದಿನಾಚರಣೆ ನ.26 ರಂದು ನಡೆಯಿತು.
ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್.ಎಂ.ಸಿ. ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರ ಗೌಡರು ಸಂವಿಧಾನ ರಚನೆಯ ಹಿನ್ನೆಲೆ ಮತ್ತು ಮಹತ್ವ ವಿವರಿಸಿದರು. ತಹಶೀಲ್ದಾರ್ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸೇರಿದವರೆಲ್ಲರೂ ಪ್ರಮಾಣವಚನ ಸ್ವೀಕರಿಸಿದರು.


ನ.ಪಂ. ಮಾಜಿ ಅಧ್ಯಕ್ಷರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ವಿನಯ್ ಕುಮಾರ್ ಕಂದಡ್ಕ ಮತ್ತು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನ.ಪಂ.ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕೆರಿ, ಬುದ್ಧ ನಾಯ್ಕ್, ಸರೋಜಿನಿ ಪೆಲತಡ್ಕ, ಶಶಿಕಲಾ ದುಗಲಡ್ಕ, ಪ್ರವಿತಾ ಪ್ರಶಾಂತ್, ಕಿಶೋರಿ ಶೇಟ್, ನ.ಪಂ. ಉದ್ಯೋಗಿಗಳು, ಪೌರ ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.