ಪ್ರೆಸ್ ಕ್ಲಬ್ ವತಿಯಿಂದ ಸೌದಿಅರೇಬಿಯ ಪ್ರೆಸ್ ಕ್ಲಬ್ ಪ್ರತಿನಿಧಿ ಶಮೀರ್ ಜಟ್ಟಿಪಳ್ಳರಿಗೆ ಗೌರವಾರ್ಪಣೆ

0


ಸುಳ್ಯ ಪ್ರೆಸ್ ಕ್ಲಬ್ ನ ಪ್ರಥಮ ಮಹಡಿ ಕಾಮಗಾರಿ ಸಹಾಯಾರ್ಥ ನಡೆಯುತ್ತಿರುವ ಅಭಿಯಾನದ ಅಂಗವಾಗಿ ನಡೆದ ಸಭೆಯಲ್ಲಿ ಸುದ್ದಿ ಜಿದ್ದಾ ಪ್ರತಿನಿಧಿ ಶಮೀರ್ ಜಟ್ಟಿಪಳ್ಳ ರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಸೌದಿ ಅರೇಬಿಯಾ ಪ್ರತಿನಿಧಿಯಾಗಿ ಶಮೀರ್ ಜಟ್ಟಿಪಳ್ಳ ರವರನ್ನು ನೇಮಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ ಬಂಟ್ವಾಳ್ ವಹಿಸಿದ್ದರು. ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ನಿರ್ದೇಶಕರುಗಳಾದ ದುರ್ಗಾಕುಮಾರ್ ನಾಯರ್ ಕೆರೆ, ಕೃಷ್ಣ ಬೆಟ್ಟ, ಗಂಗಾಧರ ಕಲ್ಲಪಳ್ಳಿ, ಶರೀಫ್ ಜಟ್ಟಿಪಳ್ಳ, ಯಶ್ವಿತ್ ಕಾಳಂಮನೆ, ಪೂಜಾಶ್ರೀ ವಿತೇಶ್, ಸದಸ್ಯರುಗಳಾದ ಗಂಗಾಧರ ಮಟ್ಟಿ, ಶಿವಪ್ರಸಾದ್ ಕೇರ್ಪಳ, ಪದ್ಮನಾಭ ಮುಂಡೋಕಜೆ, ಕೆ.ಟಿ‌.ಭಾಗೀಶ್,ಮಿಥುನ್ ಕರ್ಲಪ್ಪಾಡಿ, ಪ್ರಜ್ಞಾ ಎಸ್.ನಾರಾಯಣ್ ಉಪಸ್ಥಿತರಿದ್ದರು.